ಎಟಿಎಂ ಕೇಂದ್ರಕ್ಕೆ ಬೆಂಕಿ

ಹೈದರಾಬಾದ್ : ವಿಚಿತ್ರ ಘಟನೆಯೊಂದರಲ್ಲಿ ಆಗಂತುಕನೊಬ್ಬ ಇಲ್ಲಿನ ಕುಕ್ಕಟಪಳ್ಳಿ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿರುವ ಇಂಡಿಯನ್ ಓವರಸೀಸ್ ಬ್ಯಾಂಕ್ ಇದರ ಎಟಿಎಂಗೆ ಬೆಂಕಿ ಹಚ್ಚಿ ಜಾತಿ ಮತ್ತು  ಧರ್ಮವನ್ನು ಜನರು ತ್ಯಜಿಸಬೇಕೆಂದು ಹಾಗೂ ಜಗತ್ತನ್ನು ಬದಲಾಯಿಸುವ ಅಗತ್ಯವಿದೆಯೆಂದು ಹೇಳುವ 17 ಪುಟಗಳಿರುವ ಪತ್ರವೊಂದನ್ನು ಅಲ್ಲಿ ಬಿಟ್ಟು ತೆರಳಿದ್ದಾನೆ. ತೈಲ ಸುರಿದು ಆತ ಅಲ್ಲಿನ ಎಟಿಎಂ ಯಂತ್ರ ಹಾಗೂ ಕೆಲ ಪೀಠೋಪಕರಣಗಳಿಗೆ ಬೆಂಕಿ ಹಚ್ಚಿ ಅವುಗಳನ್ನು ಹಾನಿಗೊಳಿಸಿದ್ದಾನೆ.

LEAVE A REPLY