ಅಂಗಡಿಗೆ ಬೆಂಕಿ ತಗುಲಿ ಹಾನಿ

ನಮ್ಮ ಪ್ರತಿನಿಧಿ ವರದಿ

ಹಳಿಯಾಳ : ಪಟ್ಟ ಸಮೀಪದ ಹವಗಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂದೆ ಇರುವ ಅಂಗಡಿಗೆ ವಿದ್ಯುತ್ ಅವಘಡದಿಂದ ಆಕಸ್ಮಿಕವಾಗಿ ಬೆಂಕಿ ಹಾನಿಯಾಗಿವೆ.

ಹವಗಿ ಗ್ರಾಮದ ಮನೋಜ ಶಾಂತಿನಾಥ್ ಚಿಣಗಿ ಎಂಬವರಿಗೆ ಸೇರಿದ ಕಿರಾಣಿ, ಜನರಲ್ ಸ್ಟೋರ್ಸ್, ಕೋಲ್ಡ್ರಿಂಕ್ಸ್ ಮಾರಾಟ ಮಾಡುವ ಅಂಗಡಿಗೆ ಬೆಳಿಗ್ಗೆ ಸುಮಾರು 9 ಗಂಟೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಅಂಗಡಿಯಲ್ಲಿದ್ದ 1 ಪ್ರಿಜ್, 2 ಝರಾಕ್ಸ್ ಮಶೀನ್, ಒಂದು ಲ್ಯಾಮಿನೇಶನ್ ಮಾಡುವ ಯಂತ್ರ ಹಾಗೂ ಇಲೆಕ್ಟ್ರಿಕಲ್ ತೂಕದ ಮಶೀನ್ ಮತ್ತು ಜನರೇಟರ್ ಸುಟ್ಟು ಕರಕಲಾಗಿದ್ದು ಇದರ ಜೊತೆಗೆ ಅಂಗಡಿಯಲ್ಲಿ ಮಾರಾಟಕ್ಕೆ ಇಡಲಾಗಿದ್ದ ಪೀಠೋಪಕರಣಗಳು, ದವಸ-ಧಾನ್ಯ, ಪಠ್ಯಪುಸ್ತಕಗಳು ಸೇರಿದಂತೆ ಇನ್ನಿತರ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

LEAVE A REPLY