ಭತ್ತದ ಬಣವೆಗೆ ಬೆಂಕಿ : ಹಾನಿ

ನಮ್ಮ ಪ್ರತಿನಿಧಿ ವರದಿ

ಅಂಕೋಲಾ : ತಾಲೂಕಿನ ತೆಂಕಣಕೇರಿ ಗ್ರಾಮದಲ್ಲಿ ಶನಿವಾರ ಬಣವೆಗೆ ಬೆಂಕಿ ತಗುಲಿ ಅಂದಾಜು 25 ಸಾವಿರ ರೂ ಹಾನಿಯಾಗಿದೆ. ಬೊಮ್ಮಯ್ಯ ನಾರಾಯಣ ನಾಯ್ಕ ಇವರಿಗೆ ಸೇರಿದ ಬಣವೆಯೇ ಹಾನಿಗೊಳಗಾದದ್ದಾಗಿದೆ.

ಬಣವೆಗೆ ಬೆಂಕಿ ತಗುಲಿ ಉರಿಯುತ್ತಿದ್ದಂತೆಯೇ ಮನೆಯವರು ಮತ್ತು ಅಕ್ಕ ಪಕ್ಕದವರು ಆಗಮಿಸಿ ಬೆಂಕಿ ಆರಿಸಿದರು. ಭತ್ತದ ಪೈರಿನ ಜೊತೆಗೆ ಸುಮಾರು 5 ಸಾವಿರಕ್ಕೂ ಅಧಿಕ ಹುಲ್ಲಿನ ಕಟ್ಟು ಬೆಂಕಿಗೆ ಆಹುತಿಯಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪಂಚನಾಮೆ ನಡೆಸಿದರು.

 

LEAVE A REPLY