ಮನೆ ಬೆಂಕಿಗಾಹುತಿ

ಅಗ್ನಿ ದುರಂತ ಸಂಭವಿಸಿದ ಮನೆ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಪುತ್ತಿಗೆಯ ಮಿತ್ತಬೈಲು ಎಂಬಲ್ಲಿ ಸುರೇಶ್ ಆಚಾರ್ಯರ ಮನೆಯಲ್ಲಿ ಶುಕ್ರವಾರ ಅಗ್ನಿ ಅನಾಹುತ ಸಂಭವಿಸಿದ್ದು, ಸುಮಾರು ಎರಡು ಲಕ್ಷ ರೂ ನಷ್ಟ ಉಂಟಾಗಿದೆ.

ಮನೆಯ ಛಾವಣಿಗೆ ಬೆಳಗ್ಗಿನ ಜಾವ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದ್ದು, ಸುರೇಶ್ ಆಚಾರ್ಯ ಅದಾಗಲೇ ಕೆಲಸಕ್ಕೆ ತೆರಳಿದ್ದರು. ಮನೆ ಮಂದಿ ಹೊರಗಿದ್ದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ.

ಬೆಂಕಿಯ ತೀವ್ರತೆಗೆ ಛಾವಣಿ, ಮನೆಯೊಳಗಿನ ಪೀಠೋಪಕರಣಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು ಮತ್ತು ವಿದ್ಯುತ್ ವಯರಿಂಗ್‍ಗೆ ಹಾನಿಯಾಗಿದ್ದು ಶಾರ್ಟ್ ಸಕ್ರ್ಯೂಟ್ ಈ ದುರ್ಘಟನೆಗೆ ಕಾರಣ ಎಂದು ಹೇಳಲಾಗಿದೆ.

ಸ್ಥಳೀಯ ಮುಖಂಡ ಮಿತ್ತಬೈಲು ವಾಸುದೇವ ನಾಯಕ್ ತಕ್ಷಣ ಅಗ್ನಿಶಾಮಕ ದಳವನ್ನು ಕರೆಸಿ ರಕ್ಷಣಾ ಕಾರ್ಯದಲ್ಲಿ ನೆರವಾದರು. ಶಾಸಕ ಅಭಯಚಂದ್ರ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೆರವು ಒದಗಿಸುವ ಭರವಸೆ ನೀಡಿದ್ದಾರೆ.