ಬ್ಯಾಂಕಿನ ಕ್ಯಾಶ್ ಕೌಂಟರಿನಲ್ಲಿ ಬೆಂಕಿನಮ್ಮ ಪ್ರತಿನಿಧಿ ವರದಿ

ಸಾಂದರ್ಭಿಕ ಚಿತ್ರ

ಮಂಗಳೂರು : ನಿನ್ನೆ ಸಂಜೆ ನಗರದ ಎಂ ಜಿ ರಸ್ತೆಯಲ್ಲಿರುವ ಕಾರ್ಪೋರೇಶನ್ ಬ್ಯಾಂಕಿನ ಕ್ಯಾಶ್ ಕ್ಯಾಬಿನ್ನಿನಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾದ ಘಟನೆ ನಡೆದಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿಯಿಂದಾಗಿ ಕ್ಯಾಶ್ ಕೌಂಟಿಂಗ್ ಮೆಷಿನ್, ಒಂದು ಫೈಲ್ ಹಾಗೂ ಪುಸ್ತಕ ಹಾನಿಗೊಳಗಾಗಿದೆ.

ತಕ್ಷಣ ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬ್ಯಾಂಕಿನೊಳಗೆ ನುಗ್ಗಿ ನೀರು ಹಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ.

ಗುಡ್ ಫ್ರೈಡೆ ನಿಮಿತ್ತ ಬ್ಯಾಂಕಿಗೆ ರಜೆ ಇದ್ದರೂ ಕೂಡಾ ಲೆಕ್ಕಪರಿಶೋಧನೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಮ್ಯಾನೇಜರ್ ಬ್ಯಾಂಕಿನಲ್ಲಿ ಹಾಜರಾಗಿ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಬ್ಯಾಂಕಿನೊಳಗೆ ವಾಯರ್ ಸುಟ್ಟ ವಾಸನೆ ಬರುತ್ತಿರುವುದು ಗಮನಕ್ಕೆ ಬಂದಿದ್ದು, ಅವರು ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮತ್ತು ಪೊಲೀಸರಿಗೆ ಕೂಡಲೇ ಮಾಹಿತಿ ರವಾನಿಸುವ ಮೂಲಕ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.