ಗ್ರಾಮ ಸಹಾಯಕ ಮೇಲೆ ಹಲ್ಲೆ : ನಾಲ್ವರ ವಿರುದ್ಧ ಎಫ್ಐಆರ್

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಕುಟುಂಬದ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಿಮಿತ್ತ ಬಂದಿದ್ದ ಗ್ರಾಮ ಸಹಾಯಕರೊಬ್ಬರನ್ನು ಅವರದೇ ಸಹೋದರರು ಹಾಗೂ ಸಂಬಂಧಿಕರು ರಾಡಿನಿಂದ ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ.

ನೆಲ್ಲಿಕಾರು ಗ್ರಾಮ ಪಂಚಾಯತ್‍ನಲ್ಲಿ ಗ್ರಾಮ ಸಹಾಯಕನಾಗಿರುವ ರಮಾನಂದ ಕೋಟ್ಯಾನ್ ಅವರೇ ಹಲ್ಲೆಗೊಳಗಾದ ವ್ಯಕ್ತಿ. ಇವರು ಮಂಗಳವಾರ ತಮ್ಮ ಕುಟುಂಬಸ್ಥರ ಮನೆಯಾದ ಕೋಟೆಬಾಗಿಲಿನ ಚೌಕಿಮಠಕ್ಕೆ ಧಾರ್ಮಿಕ ಕಾರ್ಯಕ್ರಮವಿದ್ದ ನಿಮಿತ್ತ ಆಹ್ವಾನದ ಮೇರೆಗೆ ಹೋಗಿದ್ದರು.

ಪೊಲೀಸ್ ಕೇಸು ನೀಡಿದರೆ ಅಥವಾ ನ್ಯಾಯಾಲಯದ ಮೆಟ್ಟಿಲು ಹತ್ತಿದರೆ ಕಾರಿನಿಂದ ಢಿಕ್ಕಿ ಮಾಡಿ ಕೊಲ್ಲುವುದಾಗಿ ರಮಾನಂದ ಅವರಿಗೆ ಜೀವ ಬೆದರಿಕೆ ಒಡ್ಡಿರುವುದಾಗಿಯೂ ದೂರಿನಲ್ಲಿ ವಿವರಿಸಲಾಗಿದೆ. “ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ಮುಂದುವರಿಸುವಂತೆ ತಿಳಿಸಿದ್ದರೂ ರಾಜಕೀಯ ಒತ್ತಡ ಬಳಸಿ ನನ್ನನ್ನು ಡಿಸ್ಚಾರ್ಜ್ ಮಾಡಲಾಗಿದೆ” ಎಂದು ರಮಾನಂದ ತಿಳಿಸಿದ್ದಾರೆ.