ಭೂ ಹಗರಣ : ಬಿಜೆಪಿಯ ಅಶೋಕ್ ವಿರುದ್ಧ ಎಫೈಆರ್

ಬೆಂಗಳೂರು : ಬಗರ್ ಹುಕುಂ ಜಾಗ ಹಗರಣಕ್ಕೆ ಸಂಬಂಧಿಸಿ ಭ್ರಷ್ಟಾಚಾರ ನಿಗ್ರಹ ಬ್ಯೋರೋ(ಎಸಿಬಿ) ಸೋಮವಾರ ಮಾಜಿ ಡಿಸೀಎಂ ಹಾಗೂ ಪದ್ಮನಾಭನಗರದ ಬಿಜೆಪಿ ಶಾಸಕ ಆರ್ ಅಶೋಕ್ ವಿರುದ್ಧ ಎಫ್‍ಐಆರ್ ದಾಖಲಿಸಿದೆ. ಎಫ್‍ಐಆರಿನಲ್ಲಿ ಅಶೋಕ್ ಸಹಿತ 10 ಆರೋಪಿಗಳ ಹೆಸರಿದೆ. ಇವರಲ್ಲಿ ಕಂದಾಯ ನಿರೀಕ್ಷಕರಿಬ್ಬರ ಸಹಿತ ನಾಲ್ವರು ಅಧಿಕಾರಿಗಳನ್ನು ಈಗಾಗಲೇ ಬಂಧಿಸಲಾಗಿದೆ.

1998ರಿಂದ 2006ರವರೆಗೆ ಬೆಂಗಳೂರು ದಕ್ಷಿಣ ತಾಲೂಕು ಬಗರ ಹುಕುಂ ಭೂಮಿ ಮೇಲ್ವಿಚಾರಣಾ ನಿಯಂತ್ರಣ ಸಮಿತಿ ಕೆಲವು ಪ್ರಭಾವಿ ವ್ಯಕ್ತಿಗಳಿಗೆ ಜಾಗ ಮಂಜೂರಾತಿ ನೀಡಿದೆ. 2006ರವರೆಗೂ ಅಶೋಕ್ ಈ ಸಮಿತಿಯ ಅಧ್ಯಕ್ಷರಾಗಿದ್ದರು. ಪ್ರಾಥಮಿಕ ವಿಚಾರಣೆ ವೇಳೆಯೇ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ಸೋಮವಾರ

ಬೆಂಗಳೂರು (ದಕ್ಷಿಣ) ತಹಶೀಲ್ದಾರ್ ರಾಮಚಂದ್ರಯ್ಯ, ಕಂದಾಯ ನಿರೀಕ್ಷಕರಾದ ಗವಿಗೋವಿಂದ (ಹೆಮ್ಮಿಗೆಪುರ ವೃತ್ತ), ಚೌಡರೆಡ್ಡಿ (ನೆಲಗುರಿ ವೃತ್ತ) ಮತ್ತು ಅಗರ ಗ್ರಾಮ ಲೆಕ್ಕಿಗ ಶಶಿಧರ ಎಂಬವರನ್ನು ಎಸಿಬಿ ಬಂಧಿಸಿದೆ. ಆರೋಪಿಗಳನ್ನು ಮ್ಯಾಜಿಸ್ಟ್ರೇಟರರ ಕೋರ್ಟಿಗೆ ಹಾಜರುಪಡಿಸಲಾಗಿದ್ದು, ಕೋರ್ಟ್ ಆದೇಶದಂತೆ ಪೊಲೀಸ್ ಕಸ್ಟಡಿಗೆ ತಳ್ಳಲಾಗಿದೆ. ಎಸಿಬಿ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ.

ಮಾಜಿ ಗೃಹ ಸಚಿವ ಅಶೋಕ್ ಹಾಗೂ ಇತರರ ವಿರುದ್ಧ ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆಯ ಸೆಕ್ಷನ್ 13(1)(ಸಿ), 13(1)(ಡಿ) ಮತ್ತು 13(2)ಯನ್ವಯ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಭಾರತೀಯ ದಂಡ ಸಂಹಿತೆಯ 420 ಮತ್ತು 120(ಬಿ) ಹೇರಲಾಗಿದೆ ಎಂದು ಎಸಿಬಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

LEAVE A REPLY