ಕಸ್ಟಂಸ್ ಅಧಿಕಾರಿಗಳೆಂದು ಹೇಳಿ ದರೋಡೆಗೈದವರ ಬೆರಳಚ್ಚು ಪತ್ತೆ

ಪೆÇಲೀಸ್ ಶ್ವಾನ ದಳದಿಂದ ತನಿಖೆ ನಡೆಯುತ್ತಿರುವುದು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕಸ್ಟಂಸ್ ಅಧಿಕಾರಿಗಳೆಂದು ತಿಳಿಸಿ ಮನೆಗೆ ನುಗ್ಗಿದ ತಂಡ ದಂಪತಿಗೆ ಬೆದರಿಕೆಯೊಡ್ಡಿ ಆರು ಸಾವಿರ ರೂ ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೆÇಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಏಳ್ಯಾನದ ನಾರಾಯಣ ರೈ ಯವರ ಮನೆಗೆ ಕಳೆದ ಶನಿವಾರ ರಾತ್ರಿ ತಲುಪಿದ ಐದು ಮಂದಿ ತಂಡ ನಾರಾಯಣ ರೈ ಹಾಗೂ ಅವರ ಪತ್ನಿಗೆ ಬಂದೂಕು ತೋರಿಸಿ ಹಣ ದರೋಡೆಗೈದು ಪರಾರಿಯಾಗಿತ್ತು.

ಈ ದರೋಡೆ ತಂಡದ ಬೆರಳಚ್ಚ್ಚುಪತ್ತೆಯಾಗಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ.

ದರೋಡೆ ತಂಡವನ್ನು ಪತ್ತೆ ಹಚ್ಚಲು ಮೊಬೈಲ್ ಟವರ್ ಕೇಂದ್ರೀಕರಿಸಿ ತನಿಖೆಗೆ ಚಾಲನೆ ನೀಡಲಾಗಿದೆ. ಬೆರಳಚ್ಚು ತಜ್ಞರು, ಪೆÇಲೀಸ್ ಶ್ವಾನಗಳನ್ನೊಳಗೊಂಡ ತಂಡ ದರೋಡೆ ನಡೆದ ಮನೆಗೆ ಹೋಗಿ ಮಾಹಿತಿ ಕಲೆ ಹಾಕಿದೆ.