ಬಿಟ್ಟುಹೋದ ಸ್ಥಿತಿಯಲ್ಲಿ 48 ಪ್ಯಾಕೆಟ್ ಮದ್ಯ ಪತ್ತೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಪೆಟ್ಟಿಗೆಯಲ್ಲಿ ತುಂಬಿಸಿ ಸಾಗಿಸುತ್ತಿದ್ದ 48 ಪ್ಯಾಕೆಟ್ ಮದ್ಯವನ್ನು ತಂಡ ಅಬಕಾರಿ ಅಧಿಕಾರಿಗಳನ್ನು ಕಂಡು ಬಿಟ್ಟು ಪರಾರಿಯಾಗಿದೆ.

ಬುಧವಾರ ಸಂಜೆ ಕುಂಬಳೆ ಪೇಟೆಯಲ್ಲಿ ಈ ಘಟನೆ ನಡೆದಿದೆ. ಅಬಕಾರಿ ಅಧಿಕಾರಿಗಳು ಮದ್ಯವನ್ನು ವಶಪಡಿಸಿ ಕೇಸು ದಾಖಲಿಸಿದ್ದಾರೆ. ಮದ್ಯ ಸಾಗಾಟಗಾರರಿಗಾಗಿ ಶೋಧ ನಡೆಯುತ್ತಿದೆ.