ಬಿ ಆರ್ ಶೆಟ್ಟಿಯ `ಮಹಾಭಾರತಕ್ಕೆ’ 500 ಎಕರೆ ಪ್ರದೇಶದಲ್ಲಿ ಚಿತ್ರ ನಗರಿ ನಿರ್ಮಾಣ ಪ್ರಸ್ತಾಪ

ಒಂದು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ `ಮಹಾಭಾರತ’ ಚಲನಚಿತ್ರವನ್ನು ಎರಡು ಕಂತುಗಳಲ್ಲಿ ತೆರೆಯ ಮೇಲೆ ತರುವುದಾಗಿ ಘೋಷಿಸಿ ಭಾರೀ ಸಂಚಲನ ಮೂಡಿಸಿರುವ ಎನ್ನಾರೈ ಉದ್ಯಮಿ, ಯುಎಇ ಎಕ್ಸ್ಚೇಂಜ್ ಮತ್ತು ಎನ್ ಎಂ ಸಿ ಹೆಲ್ತ್ ಕೇರ್ ಸಂಸ್ಥಾಪಕ ಮತ್ತು ಅಧ್ಯಕ್ಷ ಬಿ ಆರ್ ಶೆಟ್ಟಿ ಈ ಚಿತ್ರದ ತಯಾರಿಗಾಗಿ 500 ಎಕರೆ ಪ್ರದೇಶದಲ್ಲಿ ಚಿತ್ರನಗರಿಯೊಂದನ್ನು ನಿರ್ಮಿಸುವ ಉದ್ದೇಶವಿದೆಯೆಂದು ಹೇಳಿದ್ದಾರೆ.

ಈ ಚಿತ್ರನಗರಿಗೆ `ಮಹಾಭಾರತ ಫಿಲ್ಮ್ ಸಿಟಿ’ ಎಂದು ನಾಮಕರಣ ಮಾಡುವುದಾಗಿ ಹೇಳಿರುವ ಶೆಟ್ಟಿ, ಕರ್ನಾಟಕ ಸರಕಾರ ಈ ಯೋಜನೆಗೆ ಭೂಮಿ ಒದಗಿಸಲು ಮುಂದಾಗಿದೆ ಎಂದಿದ್ದಾರೆ. ಮಹಾರಾಷ್ಟ್ರ ಹಾಗೂ ಶ್ರೀಲಂಕಾ ಸರಕಾರಗಳು ಕೂಡ ಈ ಯೋಜನೆಯಲ್ಲಿ ಆಸಕ್ತಿ ವಹಿಸಿದೆ ಎನ್ನಲಾಗಿದೆ. ಲಾಭಕ್ಕಾಗಿ ತಾನು ಈ ಚಿತ್ರ ನಿರ್ಮಾಣಕ್ಕೆ ಮುಂದಾಗಿಲ್ಲ ಎಂದು ಹೇಳಿದ ಶೆಟ್ಟಿ, “ಮಹಾಭಾರತದ ಮಹತ್ವವನ್ನು ಜಗತ್ತಿಗೇ ಸಾರಿ ಹೇಳುವ ಉದ್ದೇಶ ಈ ಯೋಜನೆಗಿದೆ” ಎಂದಿದ್ದಾರೆ.

ಖ್ಯಾತ ಮಲಯಾಳಂ ನಟ ಮೋಹನಲಾಲ್ ಚಿತ್ರದ ನಾಯಕ ನಟರಾಗಲಿದ್ದಾರೆ. ಚಿತ್ರದ ಇತರ ಪಾತ್ರಧಾರಿಗಳ ಆಯ್ಕೆಯಾದ ನಂತರ  ಅಬುಧಾಬಿಯಲ್ಲಿ ಅವರಿಗೆ ಎರಡು ತಿಂಗಳು ತರಬೇತಿ ನೀಡಲಾಗುವುದು.

ಈ `ಮಹಾಭಾರತ’ ಚಿತ್ರ ವಿ± À್ವವಿನೂತನವಾಗುವುದು ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ. ಮುಂದಿನ ವರ್ಷದ ಮೇ ತಿಂಗಳಲ್ಲಿ ಚಿತ್ರೀಕರಣ ಆರಂಭಗೊಳ್ಳುವ ನಿರೀಕ್ಷೆಯಿದೆ.