ಮಳೆಗಾಲಕ್ಕೆ ಮೊದಲು ಉಡುಪಿ ರಸ್ತೆ ಗುಂಡಿ ಮುಚ್ಚುವ ಕೆಲಸ ನಡೆಯಲಿ

ಉಡುಪಿ ಜಿಲ್ಲೆಯ ಪ್ರಮುಖ ರಸ್ತೆಗಳು ತೀರಾ ಹದಗೆಟ್ಟ ಸ್ಥಿತಿಯಲ್ಲಿದ್ದು ನಗರವನ್ನು ಅಣಕಿಸುವಂತಿದೆ. ಉಡುಪಿ ಬ್ರಹ್ಮಗಿರಿಯಿಂದ ತಾಲೂಕು ಆಫೀಸಿಗೆ ಹೋಗುವ ರಸ್ತೆಯಲ್ಲಿ ಸಾವಿರಾರು ವಾಹನ, ವಿದ್ಯಾರ್ಥಿಗಳು ನಿತ್ಯ ಸಂಚರಿಸುತ್ತಿದ್ದಾರೆ. ಆದರೆ ಈ ರಸ್ತೆ ಮಾತ್ರ ಅಗಲ ಕಿರಿದಾಗಿದ್ದು ಪಾದಚಾರಿಗಳಿಗೆ ತೊಂದರೆಯುಂಟಾಗಿದೆ. ನಡೆದು ಹೋಗುವವರು ಭಯದಿಂದಲೇ ಸಾಗಬೇಕಾದ ಸ್ಥಿತಿ. ಇದೇ ರೀತಿ ಮಣಿಪಾಲದಿಂದ ಈಶ್ವರನಗರಕ್ಕೆ ಹೋಗುವ ರಸ್ತೆಯೂ ತೀರಾ ಹದಗೆಟ್ಟಿದೆ. ಹಲವು ಕಡೆ ಡಾಂಬರು ಎದ್ದು ಗುಂಡಿ ಬಿದ್ದಿರುವುದರಿಂದ ಈ ರಸ್ತೆಯಲ್ಲಿ ಬೈಕ್ ಸಂಚಾರ ತುಂಬಾ ಕಷ್ಟವಾಗಿದೆ. ಮಣಿಪಾಲ ಮತ್ತು ಉಡುಪಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ನಗರಗಳು. ಆದರೆ ಇಲ್ಲಿನ ರಸ್ತೆ ಮಾತ್ರ ಅಂತರರಾಷ್ಟ್ರೀಯ ಖ್ಯಾತಿಯನ್ನು ಸಾರುತ್ತಿಲ್ಲ. ಸ್ಥಳೀಯಾಡಳಿತ  ಪ್ರತಿನಿಧಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು  ಉಡುಪಿ ಮಣಿಪಾಲ ರಸ್ತೆಗಳ ವಿಸ್ತರಣೆ  ಗುಂಡಿ ಮುಚ್ಚುವ ಕಾರ್ಯ ನಡೆಯಬೇಕು. ಮಳೆಗಾಲ ಆರಂಭಕ್ಕೆ ಮೊದಲು ಈ ಕಾರ್ಯ ನಡೆದರೆ ತುಂಬಾ ಉಪಕಾರವಾದೀತು

  • ಎ ಎಸ್ ಅಮನ  ಉಡುಪಿ