ಜೋಕಟ್ಟೆ ತಿರುವಿನಲ್ಲಿ ಹೆದ್ದಾರಿ ಹೊಂಡ ತುಂಬಿಸಿ

ರಾಷ್ಟ್ರೀಯ ಹೆದ್ದಾರಿ 66 ಬೈಕಂಪಾಡಿ ಸೇತುವೆಯಿಂದ ಜೋಕಟ್ಟೆ ಕಡೆ ಹೋಗುವ ತಿರುವಿನಲ್ಲಿ ಭಾರೀ ಗಾತ್ರದ ಹೊಂಡ ಬಿದ್ದಿದೆ ಈ ಹೊಂಡ ಬಿದ್ದ ಜಾಗದ ಸಮಸ್ಯೆ ನಿನ್ನೆ ಮೊನ್ನೆಯದ್ದಲ್ಲ ಪ್ರತಿ ಮಳೆಗಾಲದಲ್ಲೂ ಈ ಜಾಗದಲ್ಲಿ ಸಮಸ್ಯೆ ಇದ್ದದ್ದೇ ಕಳೆದ ಮಳೆಗಾಲದ ವೇಳೆ ಇದೇ ರೀತಿ ಸಮಸ್ಯೆಯಾದಾಗ ಆ ಜಾಗಕ್ಕೆ ತಕ್ಕಮಟ್ಟಿನ ಡಾಮರೀಕರಣದ ವ್ಯವಸ್ಥೆ ಮಾಡಿದ್ದರು ಈ ರೀತಿ ಮಾಡಿದ್ದರಿಂದ ಸ್ವಲ್ಪ ಸಮಯ ಏನೂ ತೊಂದರೆ ಇಲ್ಲದೇ ವಾಹನಗಳು ಓಡಾಡಿದವು ಮಳೆಗಾಲ ಆರಂಭವಾಗುತ್ತಿದ್ದಂತೆ ಕಳಪೆ ಡಾಮಾರೀಕರಣದಿಂದಲೋ ಅಥವಾ ಮಿತಿ ಮೀರಿದ ಸಂಖ್ಯೆಯಲ್ಲಿ ಲೋಡು ತುಂಬಿದ ವಾಹನಗಳೂ ಕೈಗಾರಿಕಾ ಪ್ರದೇಶಗಳಿಗೆ ಬರಲು ಯೂ ಟರ್ನ್ ಮಾಡುತ್ತಿರುವುದರಿಂದಲೂ ರಸ್ತೆ ತಿರುವು ಎಷ್ಟೇ ಸರಿ ಮಾಡಿದರೂ ಹೊಂಡ ಬೀಳುವುದು ನಿಲ್ಲುತ್ತಿಲ್ಲ ಆದ್ದರಿಂದ ಇಷ್ಟೊಂದು ಹೊಂಡ ಬೀಳುವ 100 ಮೀಟರ್ ಒಳಗಿನ ರಸ್ತೆಗೆ ಕಾಂಕ್ರೀಟೀಕರಣ ಮಾಡುವುದೇ ಲೇಸು ಹೀಗೆ ಮಾಡಿದಲ್ಲಿ ಸಮಸ್ಯೆ ಪರಿಹಾರವಾಗಬಹುದೇನೋ

  • ಶಿವರಾಮ್ ಕೋಟ್ಯಾನ್  ಜೋಕಟ್ಟೆ