ಉಪ್ಪಳ ರೈಲು ನಿಲ್ದಾಣ ನಿರ್ಲಕ್ಷ ್ಯ ವಿರುದ್ಧ ಹೋರಾಟಕ್ಕೆ ಚಾಲನೆ

 ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಶತಮಾನಕ್ಕೂ ಹೆಚ್ಚು ವರ್ಷಗಳ ಇತಿಹಾಸವುಳ್ಳ ಉಪ್ಪಳ ರೈಲ್ವೇ ನಿಲ್ದಾಣ ಅಭಿವೃದ್ಧಿ ಕಾಣದೆ ಅಧಃಪತನತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ರಾಜಕೀಯ ಮರೆತು, ಪಕ್ಷಾತೀತವಾಗಿ ಒಟ್ಟಾಗಿ ಹೋರಾಟಕ್ಕೆ ಮುಂದಾಗಿ, `ಸೇವ್ ಉಪ್ಪಳ’ ಎಂಬ ಕ್ರಿಯಾ ಸಮಿತಿಯನ್ನು ರೂಪಿಸಿ ಸೋಮವಾರದಂದು ಹೋರಾಟದ ಮೊದಲ ಹಂತದ ಪ್ರತಿಭಟನಾ ಸಮಾವೇಷ ಉಪ್ಪಳ ರೈಲ್ವೇ ನಿಲ್ದಾಣ ಮುಂಭಾಗದಲ್ಲಿ ನಡೆಯಿತು.

ಹೋರಾಟದ ಮೊದಲ ಹಂತದ ಪ್ರತಿಭಟನಾ ಸಮಾವೇಷಕ್ಕೆ ಮಂಗಲ್ಪಾಡಿ ಗ್ರಾ ಪಂ ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, “ಆದಾಯದ ಕಾರಣ ನೀಡಿ ಉಪ್ಪಳ ರೈಲು ನಿಲ್ದಾಣವನ್ನು ಅಭಿವೃದ್ಧಿ ಪಡಿಸದಿರುವುದು ಪೆÇಳ್ಳುವಾದವಾಗಿದ್ದು, ಈ ಬಗ್ಗೆ ನಾಗರಿಕರು, ರೈಲು ಬಳಕೆದಾರರು ಹೆಚ್ಚು ಹೋರಾಡುವ ಅಗತ್ಯವಿದೆ. ರಾಜಕೀಯ ಪಕ್ಷಬೇಧಗಳನ್ನು ಮರೆತು ಅತ್ಯಂತ ಹಳೆಯ ಉಪ್ಪಳ ರೈಲು ನಿಲ್ದಾಣದ ಅಭಿವೃದ್ಧಿಗೆ ಧ್ವನಿಯೆತ್ತುವ ಅಗತ್ಯವಿದೆ” ಎಂದರು.ಪ್ರತಿಭಟನೆಯಲ್ಲಿ ಭಾರೀ ಸಂಖ್ಯೆಯಲ್ಲಿ ಸ್ಥಳೀಯರು ಪಾಲ್ಗೊಂಡರು.