ಜ್ವರದಿಂದ ಸಾವು

ಸಾಂದರ್ಭಿಕ ಚಿತ್ರ

 ಕಾಸರಗೋಡು : ಬೆಳ್ಳಿಪ್ಪಾಡಿ ಬಾಳಂಕ್ಕುಡೆ ನಿವಾಸಿ ಚನಿಯ (32) ಅವರು ಜ್ವರದಿಂದ ಸಾವಿಗೀಡಾದರು. ಜ್ವರದಿಂದ ಬಳಲುತ್ತಿದ್ದ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸುತ್ತಿದ್ದಂತೆ ಸಾವು ಸಂಭವಿಸಿದೆ.