ತಡೆಬೇಲಿ ಕಿತ್ತೆಸೆದು ಗಡಿಗುರುತು ನಾಶ

ತಹಶೀಲ್ದಾರ್, ಪೆÇಲೀಸಿಗೆ ದೂರು

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ತಡೆಬೇಲಿ ಕಿತ್ತೆಸೆದು ಸರಕಾರಿ ಗಡಿಗುರುತು ನಾಶ ಮಾಡಿದ ಖಾಸಗಿ ವ್ಯಕ್ತಿಯ  ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪಡುಬಿದ್ರಿ ಗ್ರಾ ಪಂ ವ್ಯಾಪ್ತಿಯ ನಡ್ಸಾಲು ಗ್ರಾಮದ 272/1ಎ1 ಸರ್ವೇ ನಂಬರಿನಲ್ಲಿರುವ ಸರಕಾರಿ ಜಾಗದಲ್ಲಿ ಕಳೆದ ಮೂರೂವರೆ ದಶಕಗಳಿಂದ ವಾಸ್ತವ್ಯವಿರುವ ಲಲಿತಾ ಅವರ ಮಗ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ತಹಶೀಲ್ದಾರ್ ಮಹೇಶ್ಚಂದ್ರ ಹಾಗೂ ಪೆÇಲೀಸ್ ಇಲಾಖೆಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ಸರಕಾರಿ ಜಾಗದಲ್ಲಿರುವ ಅವರು ಹಕ್ಕುಪತ್ರಕ್ಕಾಗಿ ಅಕ್ರಮ-ಸಕ್ರಮ, 94ಸಿ ಕಲಂ ಅಡಿ ಅರ್ಜಿ ಸಲ್ಲಿಸಿದ್ದರು. ಅದರಂತೆ ತಹಶೀಲ್ದಾರ್ ಮಹೇಶ್ಚಂದ್ರ ಅವರು ಕಂದಾಯ ನಿರೀಕ್ಷಕರು, ಸರ್ವೇಯರ್, ಗ್ರಾ.ಪಂ. ಸಿಬಂದಿಗಳ ಸಹಿತ ನಡ್ಸಾಲು ಗ್ರಾಮದ 272/1ಎ1 ಸರಕಾರಿ ಜಾಗಕ್ಕೆ ಭೇಟಿ ಇತ್ತು ಪರಿಶೀಲಿಸಿ ಸರ್ವೇ ಕಾರ್ಯವನ್ನು ನಡೆಸಿ ಗಡಿಗುರುತು ಮಾಡಿ ಹೋಗಿದ್ದರು. ಇದೇ ಸ್ಥಳಕ್ಕೆ ಶಾಸಕ ವಿನಯ್ ಕುಮಾರ್ ಸೊರಕೆ ಅವರು ಕೂಡ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದು, ಮರುಸರ್ವೇ ನಡೆಸಲು ಅಕ್ರಮ-ಸಕ್ರಮ ಬೈಠಕ್‍ನಲ್ಲಿ ಆದೇಶಿಸಿದ್ದರು. ಆ ಜಾಗಕ್ಕೆ ಅಕ್ರಮ ಪ್ರವೇಶಗೈದ ಖಾಸಗಿ ಜಾಗದ ವ್ಯಕ್ತಿ ಐದಾರು ಮಂದಿ ಗೂಂಡಾಗಳನ್ನು ಕರೆತಂದು ಜಾಗದ ಗಡಿಯಲ್ಲಿದ್ದ ಇದ್ದ ಕಲ್ಲು, ತಗಡುಶೀಟುಗಳಿದ್ದ ತಡೆಬೇಲಿಯನ್ನು ಕಿತ್ತು ಹಾಕಿ ಗಡಿಗುರುತು ನಾಶ ಮಾಡಿದ್ದಾರೆ.