ಕಿರುಕುಳಕ್ಕೊಳಗಾದ ವಿದ್ಯಾರ್ಥಿನಿಯರು : ಮದ್ರಸ ಅಧ್ಯಾಪಕನ ವಿರುದ್ಧ 4 ಕೇಸು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕ್ರಣಕ್ಕೆ ಸಂಬಂಧಿಸಿ ಮದ್ರಸ ಅಧ್ಯಾಪಕನ ವಿರುದ್ಧ ನಾಲ್ಕು ಕೇಸುಗಳು ದಾಖಲಾಗಿವೆ.

ಕರ್ನಾಟಕದ ಸುಳ್ಯ ನಿವಾಸಿಯಾಗಿರುವ ಅಧ್ಯಾಪಕನ ವಿರುದ್ಧ ಕೇಸು ದಾಖಲಾಗಿದೆ. ಈತನನ್ನು ಪೆÇಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತಿದ್ದಾರೆ.

ನಾಲ್ಕು ವರ್ಷದ ಹಿಂದೆ ಅಧ್ಯಾಪಕ ಚೆಂಬರಿಕದಲ್ಲಿದ್ದು, ಕಿರುಕುಳಕ್ಕೊಳಗಾದ ವಿದ್ಯಾರ್ಥಿನಿಯೊಬ್ಬಳು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಳು. ಈ ವಿಷಯ ಕಮಿಟಿ ಪದಾಧಿಕಾರಿಗಳ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅಧ್ಯಾಪಕನನ್ನು ಕರ್ತವ್ಯದಿಂದ ತೆಗೆಯಾಲಾಗಿತ್ತು. ಬಳಿಕ ಊರಿನಲ್ಲಿ ಈ ಘಟನೆ ಭಾರೀ ಪ್ರಚಾರವಾಗಿ ಯಾರೂ ದೂರು ನೀಡಲು ಮುಂದಾಗಿರಲಿಲ್ಲ. ಬಳಿಕ ಚೈಲ್ಡ್ ಲೈನ್ ಮಧ್ಯ ಪ್ರವೇಶದಿಂದ ವಿದ್ಯಾರ್ಥಿನಿಗಳು ದೂರು ನೀಡಲು ಮುಂದಾಗಿದ್ದಾರೆ.

ಕಲಿಯಲು ಮದ್ರಸಕ್ಕೆ ಆಗಮಿಸಿದ ವಿದ್ಯಾರ್ಥಿನಿಯರು ಅಧ್ಯಾಪಕನಿಂದ ಲೈಂಗಿಕ ಕಿರುಕುಳಕ್ಕೊಳಗಾಗಿದ್ದಾರೆ. ನಾಲ್ಕು ವಿದ್ಯಾರ್ಥಿನಿಯರಿಂದ ಪೆÇಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಇನ್ನೂ ಹಲವು ವಿದ್ಯಾರ್ಥಿನಿಯರು ಅಧ್ಯಾಪಕನ ಕಿರುಕುಳಕ್ಕೊಳಗಾಗಿರುವ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಆ ವಿದ್ಯಾರ್ಥಿಗಳನ್ನು ಕೌನ್ಸಿಲಿಂಗೊಳಪಡಿಸುವುದಾಗಿ ಪೆÇಲೀಸರು ತಿಳಿಸಿದ್ದಾರೆ. ಅಧ್ಯಾಪಕನ ಪೈಶಾಚಿಕ ಕೃತ್ಯ ಬಹಿರಂಗಗೊಂಡರೆ ಅಧ್ಯಾಪಕನ ಜೀವಕ್ಕೆ ಅಪಾಯವಿರಬಹುದೆಂಬ ಶಂಕೆಯಿಂದ ಮಾಹಿತಿ ಸಿಕ್ಕ ತಕ್ಷಣ ಅಧ್ಯಾಪಕನನ್ನು ಮದ್ರಸದಿಂದ ಹೊರಹಾಕಲಾಗಿತ್ತು.


ಮುಂಜಾಗ್ರತಾ ಕ್ರಮ : 3 ಮಂದಿ ಬಂಧನ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಸಂಶಯಾಸ್ಪದ ವಾಗಿ ಕಂಡು ಬಂದ 3 ಮಂದಿಯನ್ನು ಮುಂಜಾಗ್ರತಾ ಕ್ರಮವಾಗಿ ಮಂಜೇಶ್ವರ ಪೆÇಲೀಸರು ಸೆರೆ ಹಿಡಿದಿದ್ದಾರೆ. ಶಿರಿಯ ಕುನ್ನಿಲನ ಮೊಹಮ್ಮದ್ ರಫೀಕ್ (25), ಕೈಕಂಬದ ಮೊಹಮ್ಮದ್ ಅನಸಿಲ್ (18), ಜನಪ್ರಿಯ ಪೆರಿಂಗಡಿಯ ಕಲಂದರ್ ಭಾಷಾ (22) ಎಂಬವರು ಸೆರೆಯಾಗಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ಹೊಸಂಗಡಿ ಪೇಟೆಯಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ ಇವರನ್ನು ಮಂಜೇಶ್ವರ ಪೆÇಲೀಸರು ಸೆರೆ ಹಿಡಿದು ಕೇಸು ದಾಖಲಿಸಿದ್ದಾರೆ.