ತಂದೆ, ತಾಯಿ ಜಗಳದಿಂದ ಮನೆ ಬಿಟ್ಟು ಹೋದ ಬಾಲಕಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ತಂದೆ ತಾಯಿ ದಿನನಿತ್ಯದ ಗಲಾಟೆ ಕಂಡು ರೋಸಿ ಹೋದ ಬಾಲಕಿ ಮನೆ ಬಿಟ್ಟು ಹೋಗಿದ್ದಾಳೆ. ಇದೀಗ ಈಕೆಗೆ  ಕಂಕನಾಡಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಕಪಿತಾನಿಯೋ ಶಾಲೆ ಸಮೀಪದ ಹನುಮನ ಗೌಡ ಎಂಬವರ ಪುತ್ರಿ ದೀಪಾ (14) ನಾಪತ್ತೆಯಾದಾಕೆ. ಈಕೆ ಸೆಪ್ಟೆಂಬರ್ 6ರಂದು ಮನೆಯಿಂದ ತೆರಳಿದ್ದು, ಬಳಿಕ ಮನೆಗೆ ಬಾರದೇ ನಾಪತ್ತೆಯಾಗಿದ್ದಾಳೆ ಎಂದು ಪೋಷಕರು ಠಾಣೆಗೆ ದೂರು ನೀಡಿದ್ದಾರೆ.

ದೀಪಾ ಈ ಹಿಂದೆ ಕೂಡಾ ಇದೇ ರೀತಿ ಮನೆ ಬಿಟ್ಟು ಹೋದಾಕೆ ಮೂರು ದಿನ ಬಂದಿರಲಿಲ್ಲ. ಬಳಿಕ ಈಕೆಯನ್ನು ಹುಡುಕಾಡಿ ವಿಚಾರಣೆ ನಡೆಸಿದಾಗ ಮನೆಯಲ್ಲಿ ಅಪ್ಪ-ಅಮ್ಮನ ಗಲಾಟೆ, ಅಮ್ಮನಿಗೆ ಅಪ್ಪ ಹೊಡೆಯುವುದು ನೋಡಲಾಗದೇ ತಾನು ಮನೆಯಿಂದ ಹೋಗಿದ್ದೆ ಎಂದು ಹೇಳಿದ್ದಳು.

ನಾಪತ್ತೆಯಾದ ದೀಪಾ ಬಿಳಿ ಮತ್ತು ನೀಲಿ ಬಣ್ಣದ ಚೂಡಿದಾರ್ ಧರಿಸಿರುತ್ತಾಳೆ. ಈಕೆಯ ಮಾಹಿತಿ ದೊರೆತಲ್ಲಿ ಪತ್ತೆಯಾದಲ್ಲಿ ಕಂಕನಾಡಿ ನಗರ ಠಾಣೆ, 0824-2220529, 9480805354 ಇmಚಿiಟ: ಞಚಿಟಿಞಚಿಟಿಚಿಜಥಿಣoತಿಟಿmgಛಿ@ಞsಠಿ.gov.iಟಿ  ಸಂಪರ್ಕಿಸಲು ಪೊಲೀಸರ ಪ್ರಕಟಣೆ ತಿಳಿಸಿದೆ.