ಪ್ರಗತಿಪರ ಚಿಂತಕರಲ್ಲಿ ಭಯದ ವಾತಾವರಣ

ಪ್ರಗತಿಪರ ವಿಚಾರಧಾರೆ ಹೊಂದಿದ್ದ ಚಿಂತಕಿ, ಸಾಹಿತಿ, ಹಿರಿಯ ಪತ್ರಕರ್ತೆ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶರನ್ನು ಹಂತಕರು ಗುಂಡು ಹಾರಿಸಿ ಬರ್ಬರ ಹತ್ಯೆಗೈದಿರುವುದು ನಿಜಕ್ಕೂ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಹೀನ ಕೃತ್ಯ ಎಡಪಂಥೀಯ ಚಿಂತನೆ ನಿರ್ಭೀತ ನಿಲುವುಗಳ ಮೂಲಕ ಸಮಾಜದಲ್ಲಿನ ಅಸಮಾನತೆ ಲಿಂಗ ತಾರತಮ್ಯ ಅಸ್ಪøಶ್ಯತೆ ಮೌಢ್ಯಾಚರಣೆ ಜಾತಿ ವ್ಯವಸ್ಥೆ ಹಾಗೂ ಕೋಮುಶಕ್ತಿಗಳ ವಿರುದ್ಧ ತಮ್ಮ ಹರಿತ ಲೇಖನಿ ಹಾಗೂ ಹೋರಾಟದ ಮೂಲಕ ಜಾತ್ಯತೀತ ಸಮಾಜ ನಿರ್ಮಾಣ ಮಾಡಲು ಶ್ರಮಿಸಿದ ದಿಟ್ಟ ಮಹಿಳೆ ಗೌರಿ ಲಂಕೇಶ್ ಇವರ ಈ ಹತ್ಯೆ ಅಭಿವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆಯಾಗಿದೆ  ಇದು ಖಂಡನಾರ್ಹ ಇತ್ತೀಚೆಗೆ ದೇಶದಲ್ಲಿ ವೈಚಾರಿಕ ಚಿಂತನೆ ಹೊಂದಿದ್ದ ನರೇಂದ್ರ ದಾಬೋಲ್ಕರ್ ಗೋವಿಂದ ಪನ್ಸಾರೆ ಎಂ ಎಂ ಕಲಬುರ್ಗಿಯವರಂತಹ ವಿಚಾರವಾದಿಗಳ ಹತ್ಯೆಗಳು ಒಂದಾದ ಮೇಲೆ ಒಂದರಂತೆ ನಡೆಯುತ್ತಿದ್ದು ದೇಶದ ಪ್ರಗತಿಪರ ಚಿಂತಕರನ್ನು ಭಯ ಪಡುವಂತೆ ಮಾಡಿದೆ. ಇದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ನೀಡಿದ ದೊಡ್ಡ ಹೊಡೆತ ಎಂದರೆ ತಪ್ಪಾಗಲಾರದು ದೇಶದೆಲ್ಲೆಡೆ ವಿಚಾರವಾದಿಗಳ ಹತ್ಯೆಯ ಮೂಲಕ ಹಿಂಸೆ ಬಿತ್ತುತ್ತಿರುವ ಅಂಧ ಶ್ರದ್ಧೆ ಹೊಂದಿರುವ ಗುಂಪುಗಳು ದೇಶದಲ್ಲಿ ನರಕ ಸೃಷ್ಟಿಸುತ್ತಿವೆ ಆದ್ದರಿಂದ ಆದಷ್ಟು ಬೇಗ ಈ ಘೋರ ಕೃತ್ಯವನ್ನು ಎಸಗಿರುವ ಹಂತಕರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಿದೆ

  • ಕೆ ಅಶ್ವತ್ ಸುವರ್ಣ  ಉಪ್ಪಿನಂಗಡಿ