ಯುವತಿಯ ಅತ್ಯಚಾರಗೈದ 3 ಮಕ್ಕಳ ತಂದೆ ಬಂಧನ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಯುವತಿಯೊಬ್ಬಳಿಗೆ ಕಂಕಣ ಭಾಗ್ಯ ಕೂಡಿ ಬಾರದ ಹಿನ್ನೆಲೆಯಲ್ಲಿ ಆಕೆಯ ಜಾತಕವನ್ನು ಸರಿಮಾಡಿಸುವುದಾಗಿ ಹೇಳಿ ಯುವತಿಯನ್ನು ಕÀರೆದುಕೊಂಡು ಹೋಗಿದ್ದ ಮೂರು ಮಕ್ಕಳ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

ಆರ್ಯಾಪು ಗ್ರಾಮದ ಇಂತಿಲ ನಿವಾಸಿ ಕುಮಾರ್ ಮಡಿವಾಳ ಯುವತಿಯನ್ನು ಅತ್ಯಾಚಾರ ಮಾಡಿದ ಆರೋಪಿ.

ಯುವತಿ ಆರೋಪಿಯ ಮನೆ ಸಮೀಪದ ಬ್ರೆಡ್ ಫ್ಯಾಕ್ಟರಿಗೆ ಕೂಲಿ ಕೆಲಸಕ್ಕೆ ಬರುತ್ತಿದ್ದಳು. ಯುವತಿ ದಲಿತ ಕುಟುಂಬಕ್ಕೆ ಸೇರಿದವಳು. ಆಕೆಯ ಪರಿಚಯ ಮಾಡಿಕೊಂಡಿದ್ದ ಕುಮಾರ ಆಕೆಯ ಜೊತೆ ನಿರಂತರ ಫೋನಿನಲ್ಲಿ ಸಂಪರ್ಕ ಇರಿಸಿಕೊಂಡಿದ್ದ. ಆಕೆಗೆ ಮದುವೆ ಮಾಡಿಸಲು ಇವನೇ ನಕಲಿ ವರನನ್ನು ಕರೆದುಕೊಂಡು ಹೋಗಿ ಆಕೆಯನ್ನು ನೋಡಿದ ಬಳಿಕ ಹುಡುಗಿ ಜಾತಕ ಸರಿಯಿಲ್ಲ ಎಂದು ಹುಡುಗನ ಕಡೆಯವರಿಂದಲೇ ಹೇಳಿಸುತ್ತಿದ್ದ. ಇದರಿಂದ ಯುವತಿ ನೊಂದಿದ್ದಳು. ಇದನ್ನು ಮನಗಂಡ ಕುಮಾರ, “ನಿನ್ನ ಜಾತಕವನ್ನು ಸರಿ ಮಾಡುವ ಜ್ಯೋತಿಷಿಗಳಿದ್ದಾರೆÉ” ಎಂದು ಆಕೆಯ ಮನೆಯವರಲ್ಲಿ ತಿಳಿಸಿ ಆಕೆಯನ್ನು ತನ್ನ ಬೈಕಿನಲ್ಲಿ ಕರೆದುಕೊಂಡು ಹೋಗಿ, ಊರೆಲ್ಲಾ ಸುತ್ತಾಡಿಸಿ ಕತ್ತಲು ಕವಿದಾಗ ಆಕೆಯನ್ನು ಪುತ್ತೂರು ನಗರದ ಕೆಮ್ಮಾಯಿ ಬಳಿ ಗುಡ್ಡವೊಂದಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆಂದು ಆರೋಪಿಸಲಾಗಿದೆ.

ಅತ್ಯಾಚಾರದ ವೇಳೆ ಯುವತಿ ವಿರೋಧ ವ್ಯಕ್ತಪಡಿಸಿದಾಗ ಆಕೆಯನ್ನು ಕೊಲ್ಲುವುದಾಗಿ ಬೆದರಿಸಿದ್ದ ಎನ್ನಲಾಗಿದೆ. ಬಳಿಕ ಪುತ್ತೂರು ಪೇಟೆಗೆ ಕರೆತಂದಾಗ ಯುವತಿ ಅಳುತ್ತಿರುವುದನ್ನು ನೋಡಿದ ಸಾರ್ವಜನಿಕರು ಸಂಶಯದಿಂದ ಆಕೆಯಲ್ಲಿ ಪ್ರಶ್ನಿಸಿದ್ದು, ಯುವತಿ ಸಾರ್ವಜನಿಕರ ಬಳಿ ನಡೆದ ಸಂಗತಿ ತಿಳಿಸಿದಳು. ತಕ್ಷಣ ನಗರ ಪೊಲೀಸರು ಬಂದು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಅತ್ಯಾಚಾರ ಮಾಡಿದ್ದನ್ನು ಆತ ಒಪ್ಪಿಕೊಂಡಿದ್ದಾನೆ.

ಆರೋಪಿ ಕುಮಾರನಿಗೆ ಮದುವೆಯಾಗಿ ಪತ್ನಿ ಮತ್ತು ಮೂರು ಮಕ್ಕಳಿದ್ದಾರೆ. ಆದರೂ ಚಪಲಚೆನ್ನಿಗನಾದ ಕುಮಾರ ಜಾತಕ ಸರಿಮಾಡುವುದಾಗಿ ಹೇಳಿ ಯುವತಿಯ ಭವಿಷ್ಯವನ್ನೇ ಹಾಳು ಮಾಡಿದ್ದಾನೆ. ಆರೋಪಿಗೆ ಶಿಕ್ಷೆ ನೀಡದೇ ಇದ್ದಲ್ಲಿ ಪ್ರತಿಭಟನೆ ನಡೆಸಲು ದಲಿತ ಸಂಘಟನೆಗಳು ತೀರ್ಮಾನಿಸಿದೆ.