ಕೈದಿ ಪುತ್ರನಿಗೆ ಗಾಂಜಾ ಪೂರೈಸಲು ಬಂದ ಅಪ್ಪ ಪೊಲೀಸರಿಗೆ ಸಿಕ್ಕಿಬಿದ್ದ !

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನ್ಯಾಯಾಂಗ ಬಂಧನದಲ್ಲಿರುವ ತನ್ನ ಪುತ್ರನನ್ನು ಕಾಣಲು ಬಂದ ಅಪ್ಪ, ಮಾದಕ ವಸ್ತು ಗಾಂಜಾವನ್ನು ಪೂರೈಸುತ್ತಿರುವಾಗ ಸಿಕ್ಕಿಬಿದ್ದಿದ್ದಾನೆ.

ಬಂಧಿತ ಆರೋಪಿ ದಿವಾಕರ್. ಮಂಗಳೂರು ಜೈಲಿನಲ್ಲಿರುವ ಪುತ್ರ ರಕ್ಷಿತ್ ಕೋಟ್ಯಾನಗೆ ಮಧ್ಯಾಹ್ನದ ಊಟ ನೀಡಲೆಂದು ಬಂದಿದ್ದ ಈತನ ಬ್ಯಾಗಿನಲ್ಲಿ ಗಾಂಜಾ ಮತ್ತು 6 ಪ್ಯಾರಾಸೆಟಮೋಲ್ ಮಾತ್ರೆಗಳು ಪತ್ತೆಯಾಗಿವೆ. ಆರೋಪಿ ಜಿಲ್ಲಾ ಕಾರಾಗೃಹದ ಬಳಿಯ ಡಯಟ್ ಕಾಲೇಜಿನ ಕಂಪೌಂಡ್ ಬಳಿ ಬಂದಾಗ ಪೊಲೀಸರು ತಪಾಸಣೆ ನಡೆಸಿ ಆತನನ್ನು ವಶಕ್ಕೆ ಪಡೆದುಕೊಂಡರು.

ಆತನ ಬಳಿ 60 ಗ್ರಾಂ ಗಾಂಜಾ, 6 ಪ್ಯಾರಾಸೆಟಮೊಲ್ ಮಾತ್ರೆ, ಒಂದು ಲಾವಾ ಕಂಪನಿ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.