ಕೃಷಿಕರು ಕಂಬಳದಿಂದ ಏನನ್ನೂ ಗಳಿಸಲಾರರು !

`ತುಳುನಾಡಿನ ಸಂಸ್ಕøತಿಯ ಕಂಬಳಕ್ಕೆ ತಡೆಯಾದರೆ ಕರಾವಳಿ, ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಬಹು ದೊಡ್ಡ ಪ್ರತಿಭಟನೆ ಆಗುತ್ತದೆ’ ಎಂಬೆಲ್ಲ ಬಹುಪರಾಕು ಮಾತುಗಳು ಕೇಳಿಬರುತ್ತಿವೆ.  ರಾಜ್ಯ ಉಚ್ಛó ನ್ಯಾಯಾಲಯ ಕಂಬಳ ಏರ್ಪಡಿಸದಂತೆ `ತಡೆ’ ಆದೇಶ ಪ್ರಕಟಿಸಿರುವುದು ಸ್ವಾಗತಾರ್ಹವಾದುದೆಂದು ಪ್ರಾಣಿದಯಾ ಸಂಘದ ಬೆಂಬಲಿಗರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಭತ್ತ ಬೇಸಾಯ ಮಾಡುವ ಎಷ್ಟೋ ರೈತರು ತಮ್ಮ ಕೊಟ್ಟಿಗೆಯಲ್ಲಿ ಕೋಣಗಳನ್ನು ಉಳುಮೆಗಾಗಿ ಸಾಕುತ್ತಿದ್ದಾರೆ ಎಂಬುದನ್ನು ರಾಜ್ಯ ಹೈಕೋರ್ಟು ಸರ್ವೇಕ್ಷಣೆ ಮಾಡಿದಾಗ ಕಂಡುಬಂದಿದೆ.

ಪ್ರತಿಷ್ಠೆ ಹೆಚ್ಚಿಸಲು ಬಂಡವಾಳಶಾಹಿಗಳು ಕಂಬಳ ಕೋಣ ಸಾಕುತ್ತಿದ್ದು ಅವುಗಳಿಗೆ ಹಿಂಸಿಸುವ ಮೂಲಕ ಪದಕ ಗೆಲ್ಲುವ ಆಟಾಟೋಪ ಮಾಡುತ್ತಿರುವುದು ವಾಸ್ತವ. ಶೇಕಡ 50ಕ್ಕೂ ಹೆಚ್ಚು ಭತ್ತ ಬೇಸಾಯದ ಗದ್ದೆಗಳು ಅಡಿಕೆ ತೋಟಗಳಾಗಿವೆ. ಶೇಕಡ 10-20ರಷ್ಟು ಗದ್ದೆಗಳಂತೂ ಮನೆ ನಿವೇಶನ ಆಗಿವೆ. ಜೋಡುಕರೆ ಕಂಬಳದ ಅದ್ಧೂರಿ ಕಾರ್ಯಕ್ರಮ ಏರ್ಪಡಿಸಿ ಕೋಟ್ಯಂತರ ರೂಪಾಯಿ ಸಂಗ್ರಹಿಸುವ ರಾಜಕಾರಣಿಗಳು ಇದಕ್ಕೆಲ್ಲ ಈಗ `ತುಳುನಾಡಿನ ಸಂಸ್ಕøತಿ’ ಎಂಬ ಹಣೆಪಟ್ಟಿ ಹಚ್ಚಿಕೊಳ್ಳುತ್ತಿರುವುದು ಹಾಸ್ಯಾಸ್ಪದ.

ತುಳುಭಾಷೆಗೆ ಸಂವಿಧಾನಾತ್ಮಕ ಮನ್ನಣೆ ದೊರಕಿಸಿಕೊಡದ ಕಾಂಗ್ರೆಸ್, ಭಾಜಪ, ಶಾಸಕರು, ಲೋಕಸಭಾ ಸದಸ್ಯರು ಕಂಬಳ ನಡೆಸುವಂತೆ ಸರಕಾರವನ್ನು ಒತ್ತಾಯಪಡಿಸಬಲ್ಲದರು ?

ಪ್ರಾಣಿ ದಯಾ ಸಂಘದ ಹೋರಾಟವನ್ನು ಹತ್ತಿಕ್ಕಲು ಕಂಬಳ ಸಮಿತಿಯ ಪದಾಧಿಕಾರಿಗಳೆಂದು ಹೇಳಿಕೊಂಡು ಪತ್ರಿಕಾಗೋಷ್ಠಿಯಲ್ಲಿ “ಪ್ರಾಣಿದಯಾ ಸಂಘದವರಿಗೆ ಒಂದು ನಾಯಿಯನ್ನೂ, ಮಂಗನನ್ನು ಸಾಕಲು ಸಾಧ್ಯವೇ ?” ಎಂದು ಕೀಳು ಮಟ್ಟದ ಸವಾಲು ಎಸೆಯುತ್ತಿರುವುದು ದುರದೃಷ್ಟಕರ.

ಈಗ ಕರ್ನಾಟಕ ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠವೇ ಕಂಬಳ ಕುರಿತ ಮನವಿಗೆ ಉತ್ತರ ನೀಡಿದ್ದು ಸ್ಬಾಗತಾರ್ಹವಾದುದು. ನೀರಿಗೆ ಬರ ಬಂದಿದ್ದು ಕೃಷಿ ಕ್ಷೇತ್ರಕ್ಕೆ ಭಾರೀ ಹೊಡತ ಬೀಳಲಿದೆಯೆನ್ನುವ ಕೃಷಿಕರು ಜೋಡುಕರೆ ಕಂಬಳ ಆಯೋಜನೆಯಿಂದ ಏನನ್ನೂ ಗಳಿಸಲಾರರು. ಜೋಡುಕರೆ ಕಂಬಳ ಎನ್ನುವುದು ತುಳುನಾಡಿನ ಸಂಪ್ರದಾಯದಲ್ಲಿ ಎಲ್ಲಿಯೂ ದಾಖಲಾಗಿಲ್ಲ ಎಂಬುದನ್ನು ಪತ್ರಿಕಾ ಹೇಳಿಕೆ ಕೊಡುವ ಕಂಬಳ ಸಮಿತಿ ಮೊದಲು ಅರಿತುಕೊಳ್ಳಲಿ. ಮೋದಿಯವರು ದುಂದುವೆಚ್ಚದ ಜೋಡುಕರೆ ಕಂಬಳಕ್ಕೂ ಸರ್ಜಿಕಲ್ ಸ್ಟೈಕ್ ಮಾಡಲಿ.

  • ಕೆ ಕೃಷ್ಣಾನಂದ, ಬಂಟ್ವಾಳ