ಸ್ವಾಮಿಯನ್ನು ದೂರಿ ರೈತ ಆತ್ಮಹತ್ಯೆ ಯತ್ನ

ಸಾಂದರ್ಭಿಕ ಚಿತ್ರ

ಬೆಂಗಳೂರು : ಕಣ್ಣೂರು ಮಕ್ಕಳ ದೇವರ ಮಠದ ಮೃತ್ಯುಂಜಯ ಸ್ವಾಮಿ ತನ್ನ ಕೃಷಿ ಭೂಮಿಯನ್ನು ಕಬಳಿಸಿ ಅದರ ಸುತ್ತಲೂ ಬೇಲಿ ನಿರ್ಮಿಸಲು ಯತ್ನಿಸಿದ್ದಾರೆಂದು ಆರೋಪಿಸಿದ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕಣ್ಣೂರು ಎಂ¨ಲ್ಲಿನ 30 ವರ್ಷದ ಕೃಷಿಕ ಮಹೇಶ್ ಸೆಲ್ಫೀ ವೀಡಿಯೊವೊಂದನ್ನು ಫೇಸ್ಬುಕ್ಕಿಗೆ ಪೋಸ್ಟ್ ಮಾಡಿ ನಂತರ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನನ್ನು ನೆಲಮಂಗಲದ ಆಸ್ಪತ್ರೆಗೆ ಸೇರಿಸಲಾಗಿದೆ.
ಆದರೆ ಸ್ವಾಮಿ ಮಾತ್ರ ಆರೋಪ ನಿರಾಕರಿಸಿದ್ದು ತನಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಹಾಗೂ ತನ್ನನ್ನು ಅನಗತ್ಯವಾಗಿ ಈ ಪ್ರಕರಣದಲ್ಲಿ ಎಳೆದು ತರಲಾಗಿದೆ ಎಂದು ಹೇಳಿದ್ದಾರೆ.