ಸಿಂಡಿಕೇಟ್ ಬ್ಯಾಂಕಿನಲ್ಲಿ ಬೀಳ್ಕೊಡುಗೆ ಸಮಾರಂಭ

ಮಂಗಳೂರು : ನಗರದ ಹಂಪನಕಟ್ಟೆಯ ಸಿಂಡಿಕೇಟ್ ಬ್ಯಾಂಕಿನ ಸೇವಾ ಶಾಖೆಯಲ್ಲಿ ಕಳೆದ 41 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಹಿರಿಯ ಶಾಖಾ ಪ್ರಬಂಧಕ ಯು ಬಿ ಸುರೇಂದ್ರನಾಥ ಫೆ 28ರಂದು ತಮ್ಮ ಸೇವೆಯಿಂದ ನಿವೃತ್ತಿ ಹೊಂದಿದರು.

ಇವರನ್ನು ಬೀಳ್ಕೊಡುವ ಸಮಾರಂಭವು ಫೆ 28ರಂದು ಬ್ಯಾಂಕಿನ ಆವರಣದಲ್ಲಿ ಜರುಗಿತು. ಬ್ಯಾಂಕಿನ ಸಹಾಯಕ ಪ್ರಬಂಧಕರುಗಳಾದ ನಾರಾಯಣ ನಾೈಕ್ ಮತ್ತು ರತ್ನರಾಜರವರು ಶಾಲು ಹೊದಿಸಿ ಸ್ಮರಣಿಕೆಯೊಂದಿಗೆ ಗೌರವಿಸಿದರು. ಬ್ಯಾಂಕಿನ ಎಲ್ಲಾ ಸಿಬ್ಬಂದಿ ವರ್ಗವು ಇವರ ಸೇವಾ ಸಂಸ್ಕøತಿ ಮತ್ತು ಕೆಲಸದ ಬಗ್ಗೆ ಇರುವ ಶ್ರದ್ಧೆಯನ್ನು ಕೊಂಡಾಡಿದರು.