ಕುಟುಂಬದ ಮೂವರ ಕಗ್ಗೊಲೆ

ಸಾಂದರ್ಭಿಕ ಚಿತ್ರ

ಸೇಡಂ (ಕಲಬುರ್ಗಿ) : ಜಿಲ್ಲೆಯ ಸೇಡಂ ತಾಲೂಕಿನ ಮುಗನೂರು ಗಾಮದಲ್ಲಿ ನಿನ್ನೆ ಆಸ್ತಿ ವಿವಾದದಲ್ಲಿ ಕುಟುಂಬವೊಂದರ ಮೂವರ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ದೇವರಾಯ ಅಡವಿಯಪ್ಪ (55), ಈತನ ಪತ್ನ ಕಲಮ್ಮ ದೇವರಾಯ (50) ಮತ್ತು ರಾಜಶೇಖರ ಬಸವರಾಜ (20) ಕೊಲೆಯಾದವರು. ರಾಜಶೇಖರನು ಅಡವಿಯಪ್ಪನ ಸಹೋದರನ ಪುತ್ರ. ಒಂದು ತುಂಡು ಜಾಗದ ವಿಷಯದಲ್ಲಿ ದೇವರಾಯನ ಕುಟುಂಬ ಮತ್ತೊಂದು ಕುಟುಂಬದೊಂದಿಗೆ ವಿವಾದ ಹೊಂದಿತ್ತು. ವಿವಾದಿತ ಜಮೀನಿನಲ್ಲಿ ಅಡವಿಯಪ್ಪ ಮತ್ತು ಇತರ ಮೂವರು ಬೀಜ ಬಿತ್ತನೆ ಕೆಲಸ ಮಾಡುತ್ತಿದ್ದಾಗ, ಮತ್ತೊಂದು ಕುಟುಂಬದ ಸದಸ್ಯರು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಗಂಭೀರ ಗಾಯಗೊಂಡಿದ್ದ ಮೂವರು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ಕೊನೆಯುಸಿರೆಳೆದಿದ್ದಾರೆ. ಗಾಯಗೊಂಡಿರುವ ಇನ್ನೊಬ್ಬನ ಸ್ಥಿತಿ ಚಿಂತಾಜನಕವಾಗಿದೆ.