ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಮಂಗಳೂರು : ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ಕೊಟ್ಟು ವಂಚನೆ ನಡೆಸಿದ ಆರೋಪದಲ್ಲಿ ಕನ್ಸಲ್ಟೆಂಟ್ ಸೆಂಟರ್ ಮೂವರು ಸಿಬ್ಬಂದಿ ವಿರುದ್ಧ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಂಚನೆಗೊಳಗಾದ ನಗರದ ನಿವಾಸಿ ಬ್ರಿಜೇಶ್ ಅವರು ದೂರು ನೀಡಿದ್ದರು.

ನಗರದ ಬೆಂದೂರವೆಲ್ ಸೆಂಟರ್ ಪಾಯಿಂಟ್ ಬಿಲ್ಡಿಂಗಿನಲ್ಲಿರುವ ಸೈಂಟ್ ಕ್ಲೈನ್ ಗ್ಲೋಬಲ್ ಎನ್ನುವ ಹೆಸರಿನ ಕನ್ಸಲ್ಟೆಂಟ್ ಕಚೇರಿಯನ್ನು ಅವರು ಸಂಪರ್ಕಿಸಿದಾಗ ವಿದೇಶಕ್ಕೆ ತೆರಳಲು ವೀಸಾ ಮಾಡಿಕೊಡುವುದಲ್ಲದೇ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇದೀಗ ಈ ಕನ್ಸಲ್ಟೆಂಟ್ ಕಚೇರಿಯನ್ನು ನಡೆಸುತ್ತಿರುವ ಆರ್ ಕೆ ಮದನಕುಮಾರ್, ಕೆ ಶ್ರೀರಾಮ್, ಸುರೇಶ್, ಸುನೇಶ್ ಎಂಬವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ತನಗೆ ವೀಸಾವನ್ನು ಕೊಡಿಸದೇ, ಉದ್ಯೋಗವನ್ನೂ ಮಾಡಿ ಕೊಡದೇ ವಂಚನೆ ಎಸಗಿದ್ದಾರೆ ಎಂದು ದೂರು ನೀಡಿದ್ದಾರೆ. ಅಲ್ಲದೇ ಬ್ರಿಜೇಶ್ ಅವರಿಂದ 2017ರ ಜುಲೈ 28ರಂದು ಒಂದು ಲಕ್ಷದ ಚೆಕ್ ಕೂಡಾ ಪಡೆದುಕೊಂಡಿದ್ದರು.

ಆದರೆ ಇದುವರೆಗೂ ವೀಸಾವನ್ನೂ ಮಾಡಿಕೊಡದೇ ಉದ್ಯೋಗವನ್ನೂ ನೀಡದೇ ವಂಚನೆ ನಡೆಸಿದ್ದಾರೆ. ಅಲ್ಲದೆ ಪಡೆದ ದಾಖಲೆಗಳನ್ನೂ ನೀಡದೇ ಸತಾಯಿಸುತ್ತಿದ್ದಾರೆ ಎಂದು ಬ್ರಿಜೇಶ್ ಕದ್ರಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.