ಚೆನ್ನೈ : 45 ಕೋಟಿ ರೂ ನಕಲಿ ಕರೆನ್ಸಿ ವಶ

ಸಾಂದರ್ಭಿಕ ಚಿತ್ರ

ಚೆನ್ನೈ : ಇಲ್ಲಿನ ಕೊಡಂಬಾಕ್ಕಂನ ವಸ್ತ್ರಾಲಂಕಾರ ಟೈಲರಿಂಗ್ ಅಂಗಡಿಯೊಂದಕ್ಕೆ ದಾಳಿ ಮಾಡಿದ ಚೆನ್ನೈ ಪೊಲೀಸರು ಈಗಾಗಲೇ ಚಲಾವಣೆಯಿಂದ ಹಿಂಪಡೆಯಲಾಗಿರುವ 500 ಮತ್ತು 1,000 ರೂ ಬೆಲೆಬಾಳುವ ಒಟ್ಟು 45 ಕೋಟಿ ರೂ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿಯಾಧರಿಸಿ ದಾಳಿ ಮಾಡಿದ ಪೊಲೀಸರು ಸರ್ಕಾರಿ ಅಧಿಕಾರಿಗಳಿಗೆ ವಸ್ತ್ರ ಹೊಲಿಸಿ ಕೊಡುವ ಅಂಗಡಿಗೆ ದಾಳಿ ಮಾಡಿ, 11 ಚೀಲಗಳಲ್ಲಿ ತುಂಬಿಸಲಾಗಿದ್ದ ಕರೆನ್ಸಿ ಮುಟ್ಟುಗೋಲು ಹಾಕಿದ್ದಾರೆ. ಈ ಹಣ ನಗರದ ಚಿನ್ನಾಭರಣದಂಗಡಿಯೊಂದರ ಮಾಲಕನಿಗೆ ಸೇರಿದ್ದಾಗಿದೆ ಎಂದು ಅಂಗಡಿ ಮಾಲಕ ದಂಡಪಾನಿ ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾನೆ.