ಮಹಿಳೆಯ ಚಿನ್ನದ ಸರ ಸೆಳೆದು ಪರಾರಿಯಾದ ನಕಲಿ ಪೊಲೀಸರು

ಸಾಂದರ್ಭಿಕ ಚಿತ್ರ

ಬೆಂಗಳೂರು : ಪೊಲೀಸ್ ವೇಷದಲ್ಲಿದ್ದ ಕಳ್ಳರಿಬ್ಬರು ಮಹಿಳೆಯೊಬ್ಬಳ  40 ಗ್ರಾಂ ತೂಕದ ಚಿನ್ನದ  ಸರವೊಂದನ್ನು ಉಪಾಯದಿಂದ ಅನ್ನಪೂರ್ಣೇಶ್ವರಿ ನಗರದಲ್ಲಿ ಎಗರಿಸಿದ್ದಾರೆ. ಸುಜಾತ ಎಂಬ ಮಹಿಳೆ  ತನ್ನ ತಾಯಿ ಮನೆಯತ್ತ ಸಾಗುತ್ತಿದ್ದಾಗ  ಪೊಲೀಸ್ ಸಮವಸ್ತ್ರಧಾರಿಗಳಾಗಿ ಬೈಕಿನಲ್ಲಿ ಬಂದ ಇಬ್ಬರು  ಪಕ್ಕದ ರಸ್ತೆಯಲ್ಲಿ ಮಹಿಳೆಯೊಬ್ಬರ ಚಿನ್ನದ ಸರವನ್ನು ಕಳ್ಳರು ಸೆಳೆದಿದ್ದಾರೆ, ನಿಮ್ಮ ಸರವನ್ನು ಜೋಪಾನವಾಗಿಡಿ ಎಂದು ಹೇಳಿದಾಗ ಅವರನ್ನು ನಂಬಿದ್ದ ಸುಜಾತ ತನ್ನ ಸರವನ್ನು ತೆಗೆದು ಕೈಯ್ಯಲ್ಲಿದ್ದ ಪ್ಲಾಸ್ಟಿಕ್ ಚೀಲದಲ್ಲಿರಿಸಿ ಮುಂದೆ ನಡೆದಿದ್ದರು. ಆದರೆ ಆಕೆ ಸ್ವಲ್ಪ ದೂರ ಹೋಗುವಷ್ಟರಲ್ಲಿಯೇ ನಕಲಿ ಪೊಲೀಸರು ಆಕೆಯ ಸರವಿರಿಸಿದ್ದ ಪ್ಲಾಸ್ಟಿಕ್ ಚೀಲವನ್ನು ಎಗರಿಸಿ ಪರಾರಿಯಾಗಿದ್ದರು.

LEAVE A REPLY