ನಕಲಿ ಕಂಪೆನಿಗಳಿಂದ ಬ್ಯಾಂಕಿಗೆ ಕೋಟಿ ಕೋಟಿ ವಂಚನೆ

ಕಿಂಗ್ ಫಿಷರ್ ವಿಮಾನ ಸಂಸ್ಥೆ ಸ್ಥಾಪಿಸಲು ವಿಜಯ್ ಮಲ್ಯರವರು ಕೋಟ್ಯಂತರ ರೂ ಕೆಲವು ಬ್ಯಾಂಕುಗಳಿಂದ ಸಾಲ ಪಡೆದು ಕಿಂಗ್ ಫಿಷರ್ ಸಂಸ್ಥೆ ನಷ್ಟದಲ್ಲಿ ಮುಳುಗಿ ಆದೀಗ ಬಂದ್ ಆಗಿ ಮಲ್ಯರವರು 9,000 ಕೋಟಿ ರೂ ಸಾಲದ ಹೊರೆಯನ್ನಿಟ್ಟು ವಿದೇಶಕ್ಕೆ ಪಲಾಯನಗೈದು ಹಾಯಾಗಿದ್ದಾರೆ. ಬ್ಯಾಂಕುಗಳಿಗೆ ಇವರು ಪಾವತಿಸಬೇಕಾದ ಸಾಲದ ಮೊತ್ತ 9,000 ಕೋಟಿ ರೂ ಎಂದರೆ ಅದೇನು ಚಿಲ್ಲರೆ ಮಾತಲ್ಲ.
ಆದರೆ ಇತ್ತೀಚಿಗಿನ ಒಂದು ವರದಿಯಂತೆ 395 ನಕಲಿ ಕಂಪೆನಿಗಳು ಬ್ಯಾಂಕಿನಿಂದ ಸಾಲ ಪಡೆದು 2,900 ಕೋಟಿ ರೂ ವಂಚನೆ ಎಸಗಿದ್ದಾರಂತೆ. ಇಷ್ಟೆಲ್ಲಾ ಮೊತ್ತವನ್ನು ಅಕ್ರಮ ವಹಿವಾಟುಗಳಿಗೆ ಬಳಸಲಾಗಿದೆ ಎಂದು ಕಳೆದ 3 ವರ್ಷಗಳ ತನಿಖೆಯಲ್ಲಿ ಸಿಬಿಐ ಪತ್ತೆ ಮಾಡಿತ್ತು ಎಂದು ತಿಳಿದುಬಂದಿದೆ. ಇದಲ್ಲದೆ 30,000 ಕೋಟಿ ರೂ ಒಳಗೊಂಡಿರುವ 200 ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸುತ್ತದೆಯಂತೆ. ಇಂತಹ ವಿವಿಧ ವಂಚನೆ ಪ್ರಕರಣಗಳಲ್ಲಿ 28 ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಒಂದು ಖಾಸಗಿ ಬ್ಯಾಂಕ್ ಭಾಗಿಯಾಗಿದೆ ಎಂದು ತಿಳಿದುಬಂದಿದೆ. ಹಾಗಾದರೆ ಈ ಕೋಟಿ ಕೋಟಿ ವಂಚನೆಗೆ ಹೊಣೆ ಯಾರು  ನಕಲಿ ಕಂಪೆನಿಗಳೋ  ಬ್ಯಾಂಕಿನಿಂದ ಸಾಲ ಪಡೆದುಕೊಂಡವರೋ ಅಥವಾ ಇಂತಹ ವಂಚನೆ ಮಾಡಲು ಸಾಲ ಕೊಟ್ಟು ಸಹಕರಿಸಿದ ಬ್ಯಾಂಕುಗಳೋ
ಮಲ್ಯರವರ ಸಾಲದ ಮೊತ್ತ 9,000 ಕೋಟಿ ರೂ. 6,000 ಕೋಟಿ ರೂ ಸಾಲದ ಬಾಬ್ತು ನಾನು ಕೊಡಲು ತಯಾರು ಎಂಬುದಾಗಿ ಇಂಗ್ಲೆಂಡಿಗೆ ಹಾರುವ ಮುನ್ನ ಅವರು ಹೇಳಿದ ಮಾತನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಿವಿಗೆ ಹಾಕಿಕೊಳದ ಮತ್ಲಬ್ ಏನು ಅಷ್ಟಾದರೂ ಸಾಲ ತೀರುತ್ತಿತ್ತಲ್ಲವೇ  ಬ್ಯಾಂಕಿನಲ್ಲಿರುವ ಹಣ ಯಾರದು  ಅದು ನಮ್ಮದು. ಬ್ಯಾಂಕಿನಲ್ಲಿ ಹಣ ಉಂಟೆಂದು ಬ್ಯಾಂಕ್ ಮ್ಯಾನೆಜರುಗಳು ಏನೆಲ್ಲ ರಿಕಾರ್ಡ್ ಪಡೆದು ಸಾಲ ನೀಡುವುದೇ  ಇದಕ್ಕೆಲ್ಲ ಬ್ಯಾಂಕ್ ಮ್ಯಾನೆಜರ್ ಸಹ ಹೊಣೆಗಾರರಲ್ಲವೇನು

  • ಜೆ ಎಫ್ ಡಿ’ಸೋಜ  ಅತ್ತಾವರ