ಮಸಾಜ್ ಪಾರ್ಲರಿಗೆ ದಾಳಿಗೈದ ನಕಲಿ ಸಿಬಿಐ ಅಧಿಕಾರಿಗಳ ಸೆರೆ

ಸಾಂದರ್ಭಿಕ ಚಿತ್ರ

ಬೆಂಗಳೂರು : ಬಸವನವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮಸಾಜ್ ಪಾರ್ಲರೊಂದಕ್ಕೆ ಸಿಬಿಐ ಮತ್ತು ರಾಷ್ಟ್ರೀಯ ಅಪರಾಧ ತನಿಖಾ ಬ್ಯೂರೋದ ಅಧಿಕಾರಿಗಳೆಂದು ಹೇಳಿಕೊಂಡು ದಾಳಿ ಮಾಡಿದ ಮಹಿಳೆಯೊಬ್ಬಳ ಸಹಿತ ಮೂವರು ನಕಲಿ ಅಧಿಕಾರಿಗಳನ್ನು ಪೊಲೀಸರು ಕಂಬಿ ಎಣಿಸುವಂತೆ ಮಾಡಿದ್ದಾರೆ. ಈ ಘಟನೆ ಶುಕ್ರವಾರ ನಡೆದಿದೆ. ಶ್ರೀನಿವಾಸ, ರವಿ ಮತ್ತು ಗೌರಮ್ಮ ಇವರೇ ಬಸವನವಾಡಿಯ ಮಸಾಜ್ ಪಾರ್ಲರಿಗೆ ದಾಳಿ ಮಾಡಿದ ನಕಲಿ ಅಧಿಕಾರಿಗಳಾಗಿದ್ದಾರೆ.