ಮಹಿಳೆಯರಿಗೆ ಮೋಸ : ನÀಕಲಿ ಬಾಬಾ ಸೆರೆ

ಸಾಂದರ್ಭಿಕ ಚಿತ್ರ

ಬೆಂಗಳೂರು : ಇಬ್ಬರು ಮಹಿಳೆಯರಿಗೆ ಮೋಸ ಮಾಡಿ, ಚಿನ್ನಾಭರಣ ಕಸಿದುಕೊಂಡ ನಕಲಿ ಬಾಬಾನೊಬ್ಬನನ್ನೂ ಮಡಿವಾಳ ಪೊಲೀಸರು ಬಂಧಿಸಿದರು.

ನವೆಂಬರ್ 4ರಂದು ಮಹಿಳೆಯರಿಗೆ ಮಾದಕ ವಸ್ತು ಬೆರೆಸಿದ `ಪವಿತ್ರ ಜಲ’ ಕುಡಿಸಿದ ಬಾಬಾ, ಅವರಲ್ಲಿದ್ದ ಚಿನ್ನಾಭರಭಣ ಕಸಿದು ಪರಾರಿಯಾಗಿದ್ದ. ಆರೋಪಿ ಬಾಬಾ ಮುನಾಝಿರ್ ಅಹ್ಮದ್(35) ಆಗಿದ್ದು, ಈತ ಬನ್ನೇರುಘಟ್ಟದ ನಿವಾಸಿ. ಈತ ಇದೇ ರೀತಿ ಹಲವರಿಗೆ ಮೋಸ ಮಾಡಿದ್ದಾನೆ. ಈತನ ವಿರುದ್ಧ ಬೆಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯರ ಮನೆಯಲ್ಲಿ ಕಳ್ಳತನ ಮಾಡಿದ್ದ 160 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೇ ರೀತಿ ಇನ್ನೆರಡು ಪ್ರಕರಣಗಳಲ್ಲಿ ಈತ 173 ಚಿನ್ನಾಭರಭಣ ಕದ್ದಿದ್ದು, ಇದನ್ನು ಅಡವಿಟ್ಟಿರುವುದು ಗೊತ್ತಾಗಿದೆ.

ಬಿಟಿಎಂ ಬಡಾವಣೆಗೆ ಆಗಮಿಸಿದ್ದ ಅಹ್ಮದ್ ವೃದ್ಧ ಮಹಿಳೆಯೊಬ್ಬರ ಮನೆಗೆ ಭೇಟಿ ನೀಡಿ, ಪಾಶ್ರ್ವವಾಯುವಿನಿಂದ ಬಳಲುತ್ತಿರುವ ಅವರ 60 ವರ್ಷದ ಪುತ್ರಿಯನ್ನು ಗುಣಪಡಿಸಲಾಗುವುದೆಂದು ಹೇಳಿ ವಿಶೇಷ ಪೂಜೆ ಮಾಡಲು ಸೂಚಿಸಿದ.

ಮರುದಿನ ಮನೆಗೆ ಬಂದು ಪೂಜೆ ಮಾಡಿದ ಬಾಬಾ, ಪವಿತ್ರ ಜಲ ನೀಡಿದ. ಇದನ್ನು ಕುಡಿದ ಇಬ್ಬರು ಮಹಿಳೆಯರೂ ಮೂರ್ಛೆ ಹೋದರು. ಬಳಿಕ ಮಹಿಳೆಯರ ಮೈಮೇಲೆ ಹಾಗೂ ಮನೆಯೊಳಗಿದ್ದ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾನೆ ಎಂದು ದೂರಲಾಗಿದೆ.