ಭಾರತೀಯರ ಅಮೆರಿಕನ್ ಕನಸು ಕಮರುತ್ತಿದೆಯೆ ?

ಅಮೆರಿಕದಿಂದ ಶೇ 70ರಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ನಂತರ ವಾಪಾಸಾಗುತ್ತಿದ್ದಾರೆ.

ಭಾರತೀಯ ವಿದ್ಯಾರ್ಥಿಗಳನ್ನು ಆಕರ್ಷಿಸುವಲ್ಲಿ ಅಮೆರಿಕದ ಕಾಲೇಜುಗಳು ಸ್ಪರ್ಧೆಗಳಿದಿವೆ. ಡೊನಾಲ್ಡ್ ಟ್ರಂಪ್ ಅವರ ನೀತಿಗಳಿಂದಾಗಿ ಅಮೆರಿಕದ ಕಾಲೇಜುಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಹೆತ್ತವರು ಹಿಂಜರಿಯುವುದೇ ಇದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮುಂಬೈ ಮೂಲದ ಕನ್ಸಲ್ಟಂಟ್ ವೈರಲ್ ದೋಶಿ ಮಾತನಾಡಿದ್ದಾರೆ.

  • ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳಲ್ಲಿ ಇತ್ತೀಚೆಗೆ ಕಂಡಿರುವ ಬದಲಾವಣೆಗಳು ಯಾವುವು ?

ಬಹಳಷ್ಟು ವಿದ್ಯಾರ್ಥಿಗಳು ಭಾರತದಲ್ಲಿಯೇ ಉಳಿದುಕೊಳ್ಳಬೇಕಾಗಿ ಬಂದಿದೆ. ಹೊಸ ಉತ್ತಮ ಕಾಲೇಜುಗಳೇ ಅಪರೂಪವಾಗುತ್ತಿದೆ. ಭಾರತದಲ್ಲಿ ಕಾಲೇಜುಗಳು ವ್ಯಾಪಕವಾಗಿ ಹೆಚ್ಚಾಗಿವೆ ಮತ್ತು ಉನ್ನತ ಶಿಕ್ಷಣ ಕ್ಷೇತ್ರ ಇದೇ ವೇಗದಲ್ಲಿ ಸಾಗಲು ವಿಫಲವಾಗಿದೆ. ಭಾರತದಲ್ಲಿ ಕಳೆದ ದಶಕದಲ್ಲಿ 130 ಅಂತಾರಾಷ್ಟ್ರೀಯ ಬಿಸ್ನೆಸ್ ಹೈಸ್ಕೂಲುಗಳು ತೆರೆದಿವೆ. ಇವುಗಳಲ್ಲಿ ಉತ್ತಮ ಎಂದು ನೆನಪಿಸಿಕೊಳ್ಳಬಹುದಾದವು ಬೆರಳೆಣಿಕೆಯವು. ವಿಜ್ಞಾನ ಕ್ಷೇತ್ರದಲ್ಲಿ ಐಐಎಸ್ಸಿಗಳು ಬೆಂಗಳೂರು ಮತ್ತು ಪುಣೆಗಳಲ್ಲಿ ಕಳೆದ ದಶಕದಲ್ಲಿ ಆರಂಭವಾದವು. ಲಿಬರಲ್ ಆಟ್ರ್ಸಿನಲ್ಲಿ ಅಶೋಕ ಮತ್ತು ಸಿಂಬಯಾಸಿಸ್ ಕಾಲೇಜುಗಳು ದುಬಾರಿಯಾಗಿರುವುದರಲ್ಲಿ ಸಂಶಯವೇ ಇಲ್ಲ. ಅದೇ ಕಾರಣಕ್ಕೆ ಬಹಳಷ್ಟು ವಿದ್ಯಾರ್ಥಿಗಳು ವಿದೇಶಕ್ಕೆ ಹಾರುತ್ತಿದ್ದಾರೆ. ನೋಟು ಅಮಾನ್ಯ, ಜಿಎಸ್ಟಿ ಕಾರಣ ಅಗ್ಗವಾಗಿದ್ದವೂ ದುಬಾರಿಯಾಗಿವೆ. ಶ್ರೀಮಂತರ ಮಕ್ಕಳು ಅಮೆರಿಕದ ಶಿಕ್ಷಣವೇ ಬಯಸುತ್ತಿದ್ದಾರೆ. ಪದವಿಪೂರ್ವ ವಿದ್ಯಾಭ್ಯಾಸಕ್ಕೂ ವಿದೇಶವನ್ನೇ ಆರಿಸುತ್ತಿದ್ದಾರೆ. ಆದರೆ ಹೀಗೆ ಸ್ಪರ್ಧೆಯಲ್ಲಿ ಹೋಗುವಾಗ ಬೇಡಿಕೆ ಇಳಿಯಬೇಕು. ಆದರೆ ಅದು ಆಗುತ್ತಿಲ್ಲ. ಅಮೆರಿಕದಲ್ಲಿ ವಿದ್ಯಾರ್ಥಿ ಪ್ರತಿಭಾವಂತನಾಗಿದ್ದರೆ ಸಾಕಷ್ಟು ಹಣಕಾಸು ನೆರವು ಸಿಗುತ್ತದೆ. ಆದರೆ ಅರ್ಹತೆ ಗಳಿಸುವುದೇ ದೊಡ್ಡ ವಿಷಯ.

  • ಟ್ರಂಪ್ ನೀತಿಗಳ ನಂತರ ಹೆತ್ತವರು ಮಕ್ಕಳನ್ನು ಅಮೆರಿಕಕ್ಕೆ ಕಳುಹಿಸಲು ಭಯಪಡುತ್ತಿದ್ದಾರೆಯೆ ?

ಅಮೆರಿಕ ಇಂದಿಗೂ ಹೆತ್ತವರಿಗೆ ವಿದೇಶಿ ಶಿಕ್ಷಣಕ್ಕೆ ಪ್ರಾಥಮಿಕ ಆಯ್ಕೆಯಾಗಿದೆ. ಆದರೆ ಇತ್ತೀಚೆಗೆ ವಿದ್ಯಾರ್ಥಿಗಳ ಸಂಖ್ಯೆ ಇಳಿದಿದೆ. ಜನರು ತಮ್ಮ ಆಯ್ಕೆಯ ಕಾಲೇಜುಗಳಲ್ಲಿ ಬದಲಾವಣೆ ತಂದಿರುವುದು ಇದಕ್ಕೆ ಕಾರಣವಾಗಿರಬಹುದು. ಕೆಲವೇ ಹೆತ್ತವರು ಗ್ರಾಮೀಣ ಅಮೆರಿಕದ ಕಾಲೇಜುಗಳಿಗೆ ಮಕ್ಕಳನ್ನು ಕಳುಹಿಸಲು ಬಯಸಿದ್ದಾರೆ. ಸಣ್ಣಪಟ್ಟಣಗಳಲ್ಲಿ ಜನಾಂಗೀಯ ವೈರ ಹೆಚ್ಚಾಗಿರುವ ಭಯ ಜನರಲ್ಲಿದೆ. ಟೆನೆಸಿ, ಟೆಕ್ಸಾಸ್, ಅಲಬಾಮ ಮೊದಲಾದ ಕಡೆಗೆ ಮಕ್ಕಳನ್ನು ಕಳುಹಿಸಲು ಹೆತ್ತವರು ಹೆಚ್ಚು ಇಷ್ಟಪಡುತ್ತಿಲ್ಲ. ಆಸ್ಟಿನ್ನಿನ ಟೆಕ್ಸಾಸ್ ವಿ ವಿ, ವರ್ಜಿನಿಯ ಅಥವಾ ನಾರ್ತ್ ಕ್ಯಾರಲಿನವನ್ನೂ ಜನರು ಬಯಸುತ್ತಿಲ್ಲ. ಅಸುರಕ್ಷಿತ ಪ್ರದೇಶಗಳ ಪ್ರಮುಖ ಕಾಲೇಜುಗಳಿಗೆ ಇದರಿಂದ ನಷ್ಟವಾಗಿದೆ. ಹೆತ್ತವರು ಹೆಚ್ಚಾಗಿ ಕೆನಡಾ ಮತ್ತು ಯುರೋಪ್ ದೇಶಗಳ ಕಡೆಗೆ ಆಸಕ್ತರಾಗಿದ್ದಾರೆ. ಆದರೆ ಅಮೆರಿಕದ ಕಾಲೇಜುಗಳ ಗುಣಮಟ್ಟಕ್ಕೆ ಹೋಲಿಕೆ ಇಲ್ಲ. ಇಂದಿಗೂ ಹೆತ್ತವರಿಗೆ ಅಮೆರಿಕವೇ ಪ್ರಥಮ ಆಯ್ಕೆ. ಆದರೆ ಗ್ರಾಮೀಣ ಅಮೆರಿಕವಲ್ಲ. ಯುರೋಪ್ ಜನಪ್ರಿಯವಾಗಿದೆ. ಆದರೆ ಭಾಷೆಯ ತೊಡಕೂ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಇಂಗ್ಲಿಷ್ ಅಲ್ಲಿ ಪ್ರಚಲಿತವಾಗಿದ್ದರೂ ಸ್ಥಳೀಯ ಭಾಷೆ ತಿಳಿದಿರುವುದೂ ಮುಖ್ಯವಾಗುತ್ತದೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳು ಜರ್ಮನಿಯನ್ನು ಆರಿಸುತ್ತಿದ್ದರೆ, ಅರ್ಥಶಾಸ್ತ್ರ ಮತ್ತು ಉದ್ಯಮದ ವಿಷಯಕ್ಕೆ ಬಂದಾಗ ವಿದ್ಯಾರ್ಥಿಗಳು ನೆದರಲ್ಯಾಂಡ್ಸ್ ಆರಿಸಿಕೊಳ್ಳುತ್ತಿದ್ದಾರೆ.

  • ಈ ಕ್ಷೇತ್ರದ ಮಹತ್ತರ ಬದಲಾವಣೆಗಳೇನು ? ಗ್ರೇಟ್ ಅಮೆರಿಕನ್ ಡ್ರೀಮ್ (ಶ್ರೇಷ್ಠ ಅಮೆರಿಕದ ಕನಸು) ಕಮರುತ್ತಿದೆಯೆ?

ಅಂತಹ ಅಮೆರಿಕದ ಕಲ್ಪನೆ 3-4 ದಶಕಗಳ ಹಿಂದಿನ ಮಾತು. 80-90ರ ದಶಕದಲ್ಲಿ ಅಮೆರಿಕಕ್ಕೆ ಮಕ್ಕಳನ್ನು ಓದಲು ಕಲಿಸುವುದು ದೊಡ್ಡ ಪ್ರತಿಷ್ಠೆಯ ವಿಷಯವಾಗಿತ್ತು. ವಿದ್ಯಾಭ್ಯಾಸದ ನಂತರ ಅಲ್ಲೇ ನೌಕರಿ ಪಡೆದು ಅಮೆರಿಕ ಸಂಜಾತರಾಗುತ್ತಿದ್ದರು. ಈಗ ಅದು ಬದಲಾಗಿದೆ. ಅಮೆರಿಕದಿಂದ ಶೇ 70ರಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ನಂತರ ವಾಪಾಸಾಗುತ್ತಿದ್ದಾರೆ. ವಿದ್ಯಾಭ್ಯಾಸದ ಸಂದರ್ಭ ಉದ್ಯೋಗ ಸಿಕ್ಕರೂ ಅವರ ಬಳಿ ಎಚ್-1ಬಿ ವೀಸಾ ಇರದ ಕಾರಣ ವಾಪಾಸಾಗಬೇಕಾಗುತ್ತಿದೆ. ಹೀಗಾಗಿ ಅಮೆರಿಕದ ಕನಸು ಈಗ ಬಹಳಷ್ಟು ಬದಲಾಗಿದೆ. ಆದರೆ ಇಂಗ್ಲೆಂಡಿನಲ್ಲಿ ವಿದ್ಯಾರ್ಥಿಗಳು ಉದ್ಯೋಗ ಕಂಡುಕೊಳ್ಳುತ್ತಿದ್ದಾರೆ. ಆದರೆ ಅಲ್ಲೂ ವೀಸಾ ಸಮಸ್ಯೆ ಎದುರಾಗುತ್ತಿದೆ. ಕಾಲ ಬದಲಾಗುತ್ತಿದ್ದಂತೆ ನಾವೂ ಬದಲಾಗಬೇಕಾಗುತ್ತಿದೆ.

 

LEAVE A REPLY