ವಿನಾಶಕಾಲೇ ವಿಪರೀತ ಬುದ್ಧಿ

ಇದು ಪಾಕಿಸ್ತಾನದ ಹುಂಬತನವಲ್ಲದೇ ಬೇರೇನೂ ಅಲ್ಲ. ಭಾರತ ಎಲ್ಲಾ ರೀತಿಯಲ್ಲೂ ಏಟು ನೀಡುತ್ತಿದ್ದರೂ ಪಾಕ್ ತನ್ನ ನರಿ ಬುದ್ಧಿ ಬಿಡುತ್ತಿಲ್ಲ. ಮೇಲಿಂದ ಮೇಲೆ ಉಗ್ರರನ್ನು ಭಾರತದ ಗಡಿಯೊಳಗೆ ನುಸುಳಿಸುತ್ತಲೇ ಇದೆ. ಸೇನಾ ನೆಲಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಲೇ ಇದೆ. ಇತ್ತೀಚಿಗೆ ಅಂತಹ ಯತ್ನವೊಂದನ್ನು ಸೇನೆ ವಿಫಲಗೊಳಿಸಿ ಮೂವರು ಉಗ್ರರನ್ನು ಹೊಡೆದುರುಳಿಸಿದೆ ಭಾರತದ ನಡೆಸಿದ ನಿರ್ದಿಷ್ಟ ದಾಳಿ ಬಳಿಕ ಉಗ್ರರು ಒಳ ನುಸುಳುವಿಕೆ ತುಸು ಕಡಿಮೆಯಾಗಿದೆ ಎನ್ನುವುದು ಸತ್ಯ. ಆದರೆ ಸಂಪೂರ್ಣ ನಿಂತಿಲ್ಲ ಸುಧಾರಿಸಿಕೊಳ್ಳಲು ಆಗದ ರೀತಿಯಲ್ಲಿ ಬಲವಾದ ಏಟು ಬೀಳುವವರೆಗೂ ಅದು ಸುಧಾರಿಸುವ ಲಕ್ಷಣಗಳೂ ಕಾಣಿಸುತ್ತಿಲ್ಲ
ಭಾರತವಂತೂ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನದ ಬಣ್ಣ ಬಯಲು ಮಾಡುತ್ತಲೇ ಇದೆ ಜತೆಗೆ ಗಡಿಯೊಳಕ್ಕೆ ಕಾಲಿಡುವ ಉಗ್ರರನ್ನು ಹೊಡೆದುರುಳಿಸುತ್ತಲೇ ಇದೆ ಈಗ ಅಮೆರಿಕಾ ಸಹ ಪಾಕಿಸ್ತಾನದ ವಿರುದ್ಧ ಕೆಂಗಣ್ಣು ಬೀರುತ್ತಿದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸೈ, ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿದೆ ಎನ್ನುವುದನ್ನು ಅಮೆರಿಕಾದ ರಕ್ಷಣಾ ಇಲಾಖೆಯೇ ಖಚಿತಪಡಿಸಿದೆ ಉಗ್ರರನ್ನು ಸಾಕುವುದನ್ನು ನಿಲ್ಲಿಸದಿದ್ದರೆ, ಆರ್ಥಿಕ ನೆರವು ಸ್ಥಗಿತಗೊಳಿಸುವ ಎಚ್ಚರಿಕೆಯನ್ನೂ ಅಮೆರಿಕಾ ನೀಡಿದೆ ಇಡೀ ಜಗತ್ತೇ ತನ್ನ ವಿರುದ್ಧ ನಿಂತಿದ್ದರೂ ಪಾಕ್ ತನ್ನ ಪುಂಡಾಟವನ್ನು ಮಾತ್ರ ನಿಲ್ಲಿಸುತ್ತಿಲ್ಲ ಎಂದಾದರೆ ಅದನ್ನು ಹುಂಬತನ ಎಂದು ಕರೆಯದೇ ಬೇರೆ ವಿಧಿಯಿಲ್ಲ ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತಿದೆ ಪಾಕಿಸ್ತಾನದ ವರ್ತನೆ. ಈಗಿನ ಸನ್ನಿವೇಶದಲ್ಲಿ ಪಾಕಿಸ್ತಾನವನ್ನು ಭೂಪಟದಿಂದ ಅಳಿಸಿ ಹಾಕುವುದು ಭಾರತಕ್ಕೆ ದೊಡ್ಡ ಸಂಗತಿ ಅಲ್ಲವೇ ಅಲ್ಲ ಪಾಕ್ ಯಾವ ಒತ್ತಡಗಳಿಗೂ ಮಣಿಯದಿದ್ದರೆ ಕೇಂದ್ರ ಸರಕಾರ ಅಂತಹ ಕ್ರಮಕ್ಕೂ ಮುಂದಾದರೆ ಅಚ್ಚರಿಯೇನೂ ಇಲ್ಲ

  • ಕೆ ಮನೋಹರ ಕೋಟ್ಯಾನ್  ಪದವಿನಂಗಡಿ