ಬಾವಿ ತೋಡಲು ಸ್ಫೋಟಕ ಉಪಯೋಗ : ಕೂಲಿ ಕಾರ್ಮಿಕನ ಮನೆ ಗೋಡೆಗಳಲ್ಲಿ ಬಿರುಕು

ಸ್ಫೋಟಕ ಉಪಯೋಗಿಸಿ ತೋಡಿದ ಬಾವಿ

 ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮೀಂಜ ಗ್ರಾ ಪಂ ವ್ಯಾಪ್ತಿಯ 13ನೇ ವಾರ್ಡು ಕೋಡಿಜಾಲ್ ಎಂಬಲ್ಲಿ ಜಲನಿಧಿ ಯೋಜನೆಯಲ್ಲಿ ಬಾವಿ ತೋಡಲು ಕಾನೂನನ್ನು ಉಲ್ಲಂಘಿಸಿ ಸ್ಫೋಟಕ ವಸ್ತುಗಳನ್ನು ಉಪಯೋಗಿಸಿರುವ ಕಾರಣ ಸಮೀಪದಲ್ಲೇ ಇದ್ದ ಕೂಲಿ ಕಾರ್ಮಿಕೊಬ್ಬನ ಮನೆಗೆ ವ್ಯಾಪಕ ಹಾನಿ ಉಂಟಾಗಿರುವುದಾಗಿ ದೂರಲಾಗಿದೆ.

ಯೂಸುಫ್ ಅವರ ಮನೆ
ಮನೆಯಲ್ಲಿ ಬಿರುಕು ಕಂಡುಬಂದಿರುವುದು

ಕಡಂಬಾರು ಕ್ಡಿಜಾಲ್ ಹೌಸ್ ಕೂಲಿ ಕಾರ್ಮಿಕ ಯೂಸುಫ್ ಎಂಬವರ ಮನೆ ಹಾನಿಗೀಡಾಗಿದೆ. ಮೀಂಜ ಗ್ರಾ ಪಂ ಕೋಡಿಜಾಲ್ ಎಂಬಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಂದ ಖರೀದಿಸಿದ 1 ಸೆಂಟ್ಸ್ ಸ್ಥಳದಲ್ಲಿ ಜಲನಿಧಿ ಯೋಜನೆಯಲ್ಲಿ ಸುಮಾರು 14 ಲಕ್ಷ ರೂ ವೆಚ್ಚದಲ್ಲಿ ಆಡಳಿತ ಪಕ್ಷವೊಂದರ ಘಟಕ ಪಕ್ಷದ ಕಾರ್ಯಕರ್ತನೊಬ್ಬನ ನೇತೃತ್ವದಲ್ಲಿ ಬಾವಿಯನ್ನು ತೋಡಲು ಸುಮಾರು 30 ಸ್ಫೋಟಕ ವಸ್ತುಗಳನ್ನು ಉಪಯೋಗಿಸಿದ್ದು, ಹಾನಿಗೀಡಾದ ಮನೆಯ ಕೂಲಿ ಕಾರ್ಮಿಕ ಹಾಗೂ ಕುಟುಂಬದವರು ಆರೋಪಿಸುತ್ತಿದ್ದಾರೆ.

ಬಾವಿಯನ್ನು ನಿರ್ಮಿಸಲು ಯಾವುದೇ ರೀತಿಯ ಸ್ಫೋಟಕ ವಸ್ತುಗಳನ್ನು ಉಪಯೋಗಿಸಬಾರದೆಂಬ ಸರಕಾರದ ಆದೇಶ ಜಾರಿಯಲ್ಲಿರುವಾಗ ಕಾನೂನನ್ನು ಗಾಳಿಗೆ ತೂರಿ ಬಾವಿ ನಿರ್ಮಿಸಲು ಸ್ಫೋಟಕ ವಸ್ತುಗಳನ್ನು ಉಪಯೋಗಿಸಿರುವುದು ಇದೀಗ ವಿವಾದವಾಗುತ್ತಿದೆ. ಸ್ಪೋಟದಿಂದಾಗಿ ಹಾನಿಗೀಡಾದ ಮನೆಗೆ ಪರಿಹಾರವನ್ನು ನೀಡುವುದಾಗಿ ಮೊದಲು ತಿಳಿಸಿದ್ದರೂ ಬಳಿಕ ಯಾವುದೇ ಸ್ಪಂದನೆ ಇಲ್ಲ. ಬಳಿಕ ಯೂಸುಫ್ ಅವರು ಮಂಜೇಶ್ವರ ಪೆÇಲೀಸರಿಗೆ, ಜಲನಿಧಿ ಇಲಾಖಾ ಅಧಿಕೃತರಿಗೆ ಹಾಗೂ ಮೀಂಜ ಗ್ರಾ ಪಂ ಅಧಿಕೃತರಿಗೆ ದೂರನ್ನು ನೀಡಿದ್ದರೂ ಯಾವುದೇ ಸ್ಪಂದನೆ ಇಲ್ಲವೆಂದು ಹೇಳುತ್ತಿದ್ದಾರೆ. ಮನೆಯ ಗೋಡೆಗಳಲ್ಲಿ ವ್ಯಾಪಕವಾದ ಬಿರುಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮನೆ ಇದೀಗ ಅಪಾಯದಂಚಿನಲ್ಲಿದೆ.