ಪುತ್ತೂರಿನ ಬೇಕರಿಗಳಲ್ಲಿ ವಾಯಿದೆ ಮುಗಿದ ಐಟಂ

ನಗರಸಭೆ ಆಹಾರ ನಿರೀಕ್ಷಕರು ಹಾಗೂ ತಾಲೂಕು ಕಚೇರಿ ಫುಡ್ ಇನಸ್ಪೆಕ್ಟರರ ಗಮನಕ್ಕೆ ಪುತ್ತೂರಿನ ಹಲವಾರು ಬೇಕರಿ ಹಾಗೂ ಜನರಲ್ ಸ್ಟೋರುಗಳಲ್ಲಿ ವಾಯಿದೆ ಮುಗಿದ ಬೇಕರಿ ಐಟಂಗಳಿವೆ. ಮೊನ್ನೆ ಒಬ್ಬರು ಖರೀದಿಸಿದ ತಿಂಡಿಯ ಪೊಟ್ಟಣದ ಮೇಲೆ 2016ರ ಮಾರ್ಚ್ ತಾರೀಕಿನ ದಾಖಲು ಇತ್ತು. ಹಾಗೆನೇ ಕೆಲವು ತಿಂಡಿ ಪೊಟ್ಟಣಗಳ ಮೇಲೆ ರಸ್ಕ್  ಬಿಸ್ಕೇಟ್ ಪ್ಯಾಕುಗಳ ಮೇಲೂ ಯಾವುದೇ ಪ್ಯಾಕ್ ಮಾಡಿದ ದಿನಾಂಕವೇ ಇಲ್ಲ. ಇದು ಬಹಳ ಅಪಾಯಕಾರಿ ಸಂಗತಿ ಇದನ್ನು ಮಾರುವುದು ಅಪರಾಧ  ಇದು ಸಾರ್ವಜನಿಕರಿಗೆ ಗಿರಾಕಿಗಳಿಗೆ ಮಾಡುವ ಮೋಸವಲ್ಲವೇ ಗಿರಾಕಿಗಳೇ ಎಚ್ಚರವಹಿಸಿ

ಬಿ ಕೌಶಿಕ್  ಪುತ್ತೂರು