ಬೆಲೆ ಬಾಳುವ ಮರಗಳನ್ನು ಕಡಿದು ಸಾಗಿಸಿದ ದೂರು : ಕ್ರಮಕ್ಕೆ ಮುಂದಾದ ಗ್ರಾ ಪಂ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮಂಜೇಶ್ವರ ಗ್ರಾ ಪಂ ವ್ಯಾಪ್ತಿಯಲ್ಲಿರುವ ಒಳಪೇಟೆಯ ಟ್ಯಾಕ್ಸಿ ನಿಲ್ದಾಣದ ಸಮೀಪವಿರುವ ಸ್ಥಳದಲ್ಲಿದ್ದ ಸುಮಾರು ಎರಡು ಲಕ್ಷ ರೂ ಮೌಲ್ಯವಿರುವ ಸುಮಾರು ಏಳು ಮರಗಳನ್ನು ಕಡಿದು ತೆಗೆದಿರುವುದಾಗಿ ಮಂಜೇಶ್ವರ ಗ್ರಾ ಪಂ ಅಧಿಕೃತರಿಗೆ ದೂರು ಲಭಿಸಿದ ಹಿನ್ನೆಲೆಯಲ್ಲಿ ಅವರು ಕ್ರಮಕ್ಕೆ ಮುಂದಾಗಿದ್ದಾರೆ.

ಖಾಸಗಿ ವ್ಯಕ್ತಿಯೊಬ್ಬರ ಕಟ್ಟಡದ ಮುಂಬಾಗದಲ್ಲಿರುವ ಸ್ಥಳದಲ್ಲಿದ್ದ ಮರಗಳನ್ನು ಕಡಿದು ತೆಗಿದಿರುವುದಾಗಿ ದೂರಲಾಗಿದೆ. ಸ್ಥಳಕ್ಕೆ ಬೇಟಿ ನೀಡಿದ ಕುಂಜತ್ತೂರು ಗ್ರಾಮಾಧಿಕಾರಿ ಅದನ್ನು ಪರಿಶೀಲಿಸಿ ಮರ ಇದ್ದದ್ದು ಖಾಸಗಿ ವ್ಯಕ್ತಿಯ ಸ್ಥಳದಲ್ಲೋ ಅಥವಾ ಗ್ರಾ ಪಂ ಸ್ಥಳದಲ್ಲಿದೆಯೋ ಎಂದು ಖಚಿತಪಡಿಸಲು ಸರ್ವೇಯರಗೆ ಅಳತೆ ಮಾಡಲು ಆದೇಶ ನೀಡಿದ್ದಾರೆ. ಇದರಂತೆ  ಸ್ಥಳಕ್ಕಾಗಮಿಸಿದ ಸರ್ವೇಯವರು ಅಳತೆ ಮಾಡಿ ಮರಗಳು ಗ್ರಾ ಪಂ ವ್ಯಾಪ್ತಿಯಲ್ಲಿದ್ದುದಾಗಿ ಖಚಿತಪಡಿಸಿರುವುದಾಗಿ ಮಂಜೇಶ್ವರ ಗ್ರಾ ಪಂ ವಿದ್ಯಾಭ್ಯಾಸ ಹಾಗು ಆರೋಗ್ಯ ಸಮಿತಿ ಅಧ್ಯಕ್ಷ ಅದ್ರಾಮ ಹಾಜಿ ಪತ್ರಿಕೆಗೆ ತಿಳಿಸಿದ್ದಾರೆ.