ಮಂಜೇಶ್ವರ ಚರ್ಚ್ ಶಾಲೆಯಲ್ಲಿ ಗಮನ ಸೆಳೆದ ವಸ್ತು ಪ್ರದರ್ಶನ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಪ್ರದರ್ಶಿಸಲು ವಿದ್ಯಾರ್ಥಿಗಳೇ ತಯಾರಿಸಿದ ವಿವಿಧ ರೀತಿಯ ವಸ್ತುಗಳನ್ನು ಗುರುವಾರದಂದು ಮಂಜೇಶ್ವರ ಇನ್ಫಾಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರದರ್ಶಿಸಲಾಯಿತು. ಇದು ಎಲ್ಲರ ಗಮನ ಸೆಳೆಯಿತು.
ಜ್ಯೂನಿಯರ್ ಹಾಗು ಸೀನಿಯರ್ ವಿಭಾಗಗಳಲ್ಲಾಗಿ ಹಲವಾರು ವಿದ್ಯಾರ್ಥಿಗಳು ವಿಜ್ಞಾನ, ಅಧ್ಯಯನ, ಲೆಕ್ಕ ಮೊದಲಾದ ವಿಷಗಳಿಗೆ ಸಂಬಂಧಿಸಿ ವಿವಿಧ ರೀತಿಯ ವಸ್ತುಗಳನ್ನು ತಯಾರಿಸಿ ಪ್ರದರ್ಶನ ನಡೆಸಿದರು. ಇದನ್ನು ವೀಕ್ಷಿಸಲು ಪೆÇೀಷಕರು ಸೇರಿದಂತೆ ಹಲವರು ಆಗಮಿಸಿದ್ದರು.
ಬಲೂನುಗಳಲ್ಲಿ ವಿವಿಧ ರೀತಿಯ ಆಕರ್ಷಣೆಗಳು, ಬಣ್ಣ ಬಣ್ಣದ ಹೂವಿನ ಕುಂಡಗಳು, ಬಾಗಿಲುಗಳಿಗೆ ತೋರಣವಾಗುತ್ತಿರುವ ಹಣಿಕೆ ವಸ್ತುಗಳು, ಹೀಗೆ ಹತ್ತು ಹಲವು ಕೌಶಲ್ಯದಿಂದ ಕೂಡಿದ ವಸ್ತುಗಳು ಪ್ರದರ್ಶನದಲ್ಲಿ ಕಂಡು ಬಂದವು.