ಅಬಕಾರಿ ಕಾಯಿದೆ ಉಲ್ಲಂಘನೆ ಪರಿ

ನಗರದ ಸಂದುಗೊಂದಿನಲ್ಲಿ  ಫುಟ್ಪಾತುಗಳಲ್ಲಿ ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿ ಬಿದ್ದವರನ್ನು ದಾಟಿ ಹೋಗಲು ಮಹಿಳೆಯರು  ಬಾಲಕಿಯರು ಅಸಹ್ಯಪಡುತ್ತಾರೆ ಮದ್ಯದಂಗಡಿ ಒಳಗೆ ಕುಡಿಯಲೇಬಾರದೆಂಬ ಅಬಕಾರಿ ಕಾಯಿದೆ ಜಾರಿಯಲ್ಲಿದೆ  ಆದರೆ ಪುತ್ತೂರು  ಸುಳ್ಯ  ಉಪ್ಪಿನಂಗಡಿ ಕಡಬ  ಬೆಳ್ತಂಗಡಿ  ಬಂಟ್ವಾಳ  ಮೂಡಬಿದ್ರೆ  ಉಳ್ಳಾಲ  ಮಂಗಳೂರು ಮುಂತಾದ ಊರುಗಳ ಮದ್ಯದಂಗಡಿಯಲ್ಲಿ ಕಂಠಪೂರ್ತಿ ಕುಡಿದು ಪುಟ್ಪಾತು  ರಸ್ತೆ ಮಧ್ಯೆ ತೂರಾಡುತ್ತಾರೆ  ಅಬಕಾರಿ ಇನ್ಸ್‍ಸ್ಪೆಕ್ಟರ್  ಸ್ಥಳೀಯ ಪೊಲೀಸ್‍ಧಿಕಾರಿಗಳು ನೋಡಿಯೂ ತೆಪ್ಪಗಿದ್ದಾರೆ  ಇದು ಪಬ್ಲಿಕ್ ನ್ಯೂಸೆನ್ಸ್ ಅಲ್ಲವೇ  ಇದರಿಂದ ಅಬಕಾರಿ ಕಾಯಿದೆ ಉಲ್ಲಂಘಿಸಿದಂತಾಗುವುದಿಲ್ಲವೇ
ಪಾನಮತ್ತರಾಗಿ ಅಂಗಡಿ ಮುಂಗಟ್ಟು ಬಾಗಿಲಲ್ಲಿ  ರಸ್ತೆ ಫುಟ್ಪಾತುಗಳಲ್ಲಿ  ರಸ್ತೆ ಮಧ್ಯೆ  ಬಸ್ ನಿಲ್ದಾಣದ ಬಳಿ  ಮದ್ಯದಂಗಡಿ ಬಾಗಿಲಲ್ಲಿ ತೂರಾಡುವವರ  ಮಲಗಿದ್ದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಅಬಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು

  • ಅನುಪಮ ಕೋಟ್ಯಾನ್  ಬಂಟ್ವಾಳ