ಹೆತ್ತವರೇ ಮಕ್ಕಳ ಪರೀಕ್ಷಾ ಫಲಿತಾಂಶ ಕೇವಲ ಅಂಕಪಟ್ಟಿಗೆ ಸೀಮಿತವೇ ಹೊರತು ಬದುಕಿಗಲ್ಲ

ಇನ್ನೇನು ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಲಿದೆ. ಫಲಿತಾಂಶ ಪ್ರಕಟಗೊಂಡ ನಂತರ ವಿದ್ಯಾರ್ಥಿಗಳು ತಮ್ಮ ನಿರೀಕ್ಷೆಯಂತೆ ಫಲಿತಾಂಶ ಬಂದಿಲ್ಲ ಎಂದು ಚಿಂತೆಗೆ ಒಳಗಾಗುವುದು ಬೇಡ. ಪೋಷಕರೂ, ಮಕ್ಕಳು ಕಡಿಮೆ ಅಂಕ ಗಳಿಸಿದ್ದಾರೆಂದು ಅವರನ್ನು ದೂಷಿಸುವುದು ಬೇಡ. ಒಂದು ವೇಳೆ ವಿದ್ಯಾರ್ಥಿ ನಪಾಸು ಆಗಿದ್ದಲ್ಲಿ ಅಥವಾ ಕಡಿಮೆ ಅಂಕ ಗಳಿಸಿದ್ದಲ್ಲಿ ಅವರನ್ನು ದೂಷಿಸÀಬೇಡಿ. ಮಕ್ಕಳ ಮನಸ್ಸು ಈ ಸಮಯದಲ್ಲಿ ತುಂಬಾ ಸೂಕ್ಷ್ಮವಾಗಿರುತ್ತದೆ. ಕಡಿಮೆ ಅಂಕ ಪಡೆದು ಅದರಿಂದ ಅವಮಾನಕ್ಕೆ ಗುರಿಯಾದರೆ ಅವರು ಯಾವ ಕೆಟ್ಟ ನಿರ್ಧಾರವನ್ನಾದರೂ ತೆಗೆದುಕೊಳ್ಳಬಹುದು. ಈ ಹಿಂದೆ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಆದ್ದರಿಂದ ಪೋಷಕರು ಇಂತಹ ಸಮಯದಲ್ಲಿ ಮಕ್ಕಳ ಮೇಲೆ ಹೆಚ್ಚು ಪ್ರೀತಿ ತೋರಿಸಿ. ಅವರನ್ನು ಉತ್ತೇಜಿಸುವಂತೆ, ಆತ್ಮವಿಶ್ವಾಸ ಮೂಡಿಸುವ ಯತ್ನ ಮಾಡಲಿ. ಇದರಿಂದ ಮಕ್ಕಳ ಮನಸ್ಸು ಹಗುರವಾಗುತ್ತದೆ. ಪರೀಕ್ಷಾ ಫಲಿತಾಂಶ ಕೇವಲ ಅಂಕಪಟ್ಟಿಗೆ ಸೀಮಿತವೇ ಹೊರತು ಬದುಕಿಗಲ್ಲ ಎಂಬ ಸತ್ಯದ ಅರಿವನ್ನು ಖಿನ್ನತೆಗೆ ಒಳಗಾಗುವ ಮಕ್ಕಳಿಗೆ ತಿಳಿಸಬೇಕಿದೆ

  • ಚಂದನ್ ಸುವರ್ಣ  ಕಾಪು ಉಡುಪಿ