ಶಿಕ್ಷಣ ಕೇಸರೀಕರಣ ರಾಷ್ಟ್ರಕ್ಕೆ ಆಪತ್ತು

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಮಾಜಿ ಸಂಸದ ಎನ್ ಎನ್ ಕೃಷ್ಣದಾಸ್

ಮಾಜಿ ಸಂಸದ ಎನ್ ಎನ್ ಕೃಷ್ಣದಾಸ್

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : “ಶಿಕ್ಷಣವನ್ನು ಕೇಸರೀಕರಣಗೊಳಿಸುತ್ತಿರುವುದು ರಾಷ್ಟ್ರಕ್ಕೆ ಆಪತ್ತು. ಇದೀಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಎಲ್ಲಾ ವಲಯಗಳನ್ನು ಕೇಸರೀಕರಣಗೊಳಿಸುವ ಯತ್ನ ನಡೆಸುತ್ತಿದೆ. ಇದು ನಮ್ಮ ಸಾರ್ವಭೌಮ ಭಾರತಕ್ಕೆ ದಕ್ಕೆ ತರುತ್ತದೆ” ಎಂದು ಮಾಜಿ ಸಂಸದ ಹಾಗೂ ಸಿಪಿಐ (ಎಂ) ರಾಜ್ಯ ಸಮಿತಿ ಸದಸ್ಯ ಎನ್ ಎನ್ ಕೃಷ್ಣ ದಾಸ್ ಹೇಳಿದರು.

ಅವರು ಹೊಸಂಗಡಿ ಹಿಲ್ ಸೈಡ್ ಸಭಾಂಗಣದಲ್ಲಿ ನಡೆದ ಕೇರಳ ಟೀಚರ್ಸ್ ಅಸೋಸಿಯೇಸನ್ನಿನ ಕಾಸರಗೋಡು ಜಿಲ್ಲಾ 26ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

“ಕೇರಳದಲ್ಲಿ ಎಡರಂಗ ಸರಕಾರ ಅಧಿಕಾರಕ್ಕೇರಿದ ಅಲ್ಪಾವಧಿಯಲ್ಲಿಯೇ ಕೇರಳದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಸಮಗ್ರ ಮುನ್ನಡೆ ದಾಖಲಿಸುತ್ತಿದೆ. ಅದೇ ರೀತಿ ಎಲ್ಲಾ ವಲಯಗಳಲ್ಲಿಯೂ ಅಭಿವೃದ್ಧಿಯ ಸುವರ್ಣಾಕ್ಷರಗಳನ್ನು ದಾಖಲಿಸುತ್ತಿದೆ. ನವ ಕೇರಳ ಮಿಶನ್  ಅಂಗವಾಗಿ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞವನ್ನು ಯಶಸ್ವಿಗೊಳಿಸಲು ಕೇರಳದ ಶಿಕ್ಷಣ ಸಮೂಹ ದೃಢ ಸಂಕಲ್ಪ ಮಾಡಿದೆ” ಎಂದರು.