ರಾಜಸ್ಥಾನ ಉಪ ಚುನಾವಣೆಯಲ್ಲಿ ಇವಿಎಂ ಅವಾಂತರ !

ಜೈಪುರ : ವಿದ್ಯುನ್ಮಾನ ಮತ ಯಂತ್ರಗಳನ್ನು ತಿರುಚಿ ದುರ್ಬಳಕೆ ಮಾಡಲಾಗುತ್ತಿದೆಯೆಂಬ ಆರೋಪಗಳು ಎಲ್ಲೆಡೆ ಕೇಳಿ ಬರುತ್ತಿರುವಂತೆಯೇ  ರವಿವಾರ  ಧೊಲ್ಪುರ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲೂ ಇದೇ ಆರೋಪ ಪ್ರತಿಧ್ವನಿಸಿದೆ.

ತಾನು ಕಾಂಗ್ರೆಸ್ ಪಕ್ಷದ ಚಿಹ್ನೆಯಿರುವ ಪಕ್ಕದ ಗುಂಡಿಯನ್ನೊತ್ತಿದರೂ  ಮತ ಯಂತ್ರದಿಂದ ಬಂದ ಪ್ರಿಂಟ್ ಔಟಿನಲ್ಲಿ  ಅದು  ಕಮಲ ತೋರಿಸುತ್ತಿತ್ತು ಎಂದು  ರಾಕೇಶ್ ಜೈನ್ ಎಂಬ ಮತದಾರರೊಬ್ಬರು ಆರೋಪಿಸಿದ್ದಾರೆ.

ಇದರಿಂದ ಅಲ್ಲಿನ ಚುನಾವಣಾಧಿಕಾರಿ ಚುನಾವಣಾ ಪ್ರಕ್ರಿಯೆಯನ್ನು ಕನಿಷ್ಠ ಎರಡು ಗಂಟೆಗಳ ಕಾಲ ನಿಲ್ಲಿಸಬೇಕಾಯಿತು. ಈ ಘಟನೆ ಕಾಂಗ್ರೆಸ್ ಪ್ರತಿಭಟನೆಗೂ ಕಾರಣವಾಯಿತು. ಕನಿಷ್ಠ ಒಂದು ಡಜನ್ ಮತಗಟ್ಟೆಗಳಲ್ಲಿ ಇವಿಎಂ ಸರಿಯಾಗಿ ಕಾರ್ಯನಿರ್ವಹಿಸದೇ ಇರುವ ಬಗ್ಗೆ ವರದಿಗಳು ಬಂದಿವೆ.

ಇತ್ತೀಚೆಗೆ ಮಧ್ಯ ಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ತಪಾಸಣೆಯೊಂದರ ವೇಳೆ ಇವಿಎಂನಲ್ಲಲಿ ಯಾವುದೇ ಗುಂಡಿ ಒತ್ತಿದರೂ ಮತ ಬಿಜೆಪಿ ಪರ ಬೀಳುತ್ತಿದ್ದುದು ಬೆಳಕಿಗೆ ಬಂದು ಭಾರೀ ಕೋಲಾಹಲ  ಸೃಷ್ಟಿಯಾಗಿತ್ತು.