`ಮಾಹಿತಿ ಹಕ್ಕು ಬಳಕೆ ಪ್ರತಿಯೊಬ್ಬನ ಹಕ್ಕು”

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ಎಲ್ಲಿ ಸಂಘಟಿತ ಹೋರಾಟವಿದೆಯೋ ಅಲ್ಲಿ ನಾವು ನ್ಯಾಯವನ್ನು ಪಡೆದುಕೊಳ್ಳಲು ಸಾಧ್ಯವಿದೆ. ಮಾಹಿತಿ ಹಕ್ಕು ಪಡೆದುಕೊಳ್ಳುವುದು ಮಾನವನ ಬದುಕಿನ ಹಕ್ಕಿನ ಅವಿಭಾಜ್ಯ ಅಂಗವಾಗಿದೆ. ನಾಗರಿಕರ ಹಕ್ಕು ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸಿಕೊಳ್ಳಬೇಕಾದರೆ ಮಾಹಿತಿ ಹಕ್ಕು ಹೆಚ್ಚು ಸಮರ್ಥವಾಗಿ ಬಳಸಿಕೊಳ್ಳಬೇಕು” ಎಂದು ಅಖಿಲ ಭಾರತ ವಿಚಾರವಾದಿ ಸಂಘಟನೆ ಅಧ್ಯಕ್ಷ ನರೇಂದ್ರ  ನಾಯಕ್ ಹೇಳಿದ್ದಾರೆ.

ಮಾಹಿತಿ ಹಕ್ಕು ಕಾರ್ಯಕರ್ತರ ಸಮಥರ್À ಬಳಕೆ ಕುರಿತು ನಗರದ ವಿಕಾಸ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜನಪರ ಉದ್ದೇಶದೊಂದಿಗೆ ಮಾಹಿತಿ ಹಕ್ಕು ಆಧರಿಸಿ ಸಕ್ರಿಯವಾಗಿರುವ ಕಾರ್ಯಕರ್ತರು ಸರಕಾರದ ವಿವಿಧ ಇಲಾಖೆಗಳಲ್ಲಿ ತಾವು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಹಂಚಿಕೊಂಡರು. ಕೆಲವು ಇಲಾಖೆಗಳಲ್ಲಿ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಚರ್ಚೆ ಕೂಡಾ ಇದೇ ಸಂದರ್ಭದಲ್ಲಿ ನಡೆಯಿತು.

ಸಂಘಟಿತ ಹೋರಾಟ ಸ್ವರೂಪದಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಮಾಹಿತಿ ಹಕ್ಕು ಬಳಕೆದಾರರ ವೇದಿಕೆ ನಡೆಸಲು ನಿರ್ಧರಿಸಲಾಯಿತು. ಸಮಿತಿಯ ನೂತನ ಸಂಚಾಲಕರಾಗಿ ಮನೋಜ್ ವಾಮಂಜೂರು, ಸಹ ಸಂಚಾಲಕರಾಗಿ ಯೋಗೀಶ್ ಜಪ್ಪಿನಮೊಗರು, ಸುಕುಮಾರ್, ಗೌರವ ಸಲಹೆಗಾರರಾಗಿ ನರೇಂದ್ರ ನಾಯಕ್, ಕೃಷ್ಣಪ್ಪ ಕೊಂಚಾಡಿ ಮುಂತಾಗಿ 7 ಮಂದಿ ಸದಸ್ಯರನ್ನು ಒಳಗಂಡ ಸಮಿತಿ ರಚಿಸಲಾಯಿತು.