“ಪ್ರತೀ ಸಲ ಮಹಿಳಾ ಕಾರ್ಡಿನಿಂದಲೇ ಆಡುವುದು ಅಸಾಧ್ಯ”

ಈ ಮಾತನ್ನು ಕೊರಿಯೋಗ್ರಾಫರ್ ಕಮ್ ಡೈರೆಕ್ಟರ್ ಫರ್ಹಾ ಖಾನ್ ಹೇಳಿದ್ದಾಳೆ. ಇದು ಕಂಗನಾ ರನೌತ್ ಇತ್ತೀಚೆಗಿನ ಸಂದರ್ಶನದ ಕುರಿತಾಗಿದೆ. ಕಂಗನಾ `ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಹೃತಿಕ್ ರೋಷನ್, ಆದಿತ್ಯಾ ಪಾಂಚೋಲಿ ಮೊದಲಾದವರಿಂದ ತಾನು ಹೇಗೆ ಮೋಸ ಹೋದೆ ಎಂದೆಲ್ಲ ವಿವರಿಸಿದ್ದಳು. ಜೊತೆಗೇ ಅವರ ಮಾನ ತೆಗೆಯುವ ರೀತಿಯಲ್ಲಿ ಸಿಕ್ಕಾಪಟ್ಟೆ ಅವರನ್ನು ಉಗಿದಿದ್ದಾಳೆ ಕೂಡಾ. ಈ ಬಗ್ಗೆ ಸಿನಿಜರ್ನಲಿಸ್ಟ್ ಫರ್ಹಾ ಖಾನ್ ಪ್ರತಿಕ್ರಿಯೆ ಕೇಳಿದಾಗ ಆಕೆ “ಪ್ರತೀ ಸಲ ಮಹಿಳಾ ಕಾರ್ಡಿನಿಂದಲೇ ಆಡುವುದು ಅಸಾಧ್ಯ” ಎಂದಿದ್ದಾಳೆ.

ಈ ಬಗ್ಗೆ ಪ್ರತಿಕ್ರಿಯಿಸುತ್ತಾ ಫರ್ಹಾ “ನಾನು ಯಾರನ್ನೂ ಕುರಿತಾಗಿ ಹೇಳುತ್ತಿಲ್ಲ. ಆದರೆ ನನ್ನ ಲೆಕ್ಕದಲ್ಲಿ ಸ್ತ್ರೀವಾದ ಎಂದರೆ ಸಮಾನತೆ. ಪರುಷನಾಗಲೀ ಮಹಿಳೆಯಾಗಲೀ ಇನ್ನೊಬ್ಬರ ಸ್ಥಾನದಲ್ಲಿ ನಿಂತು ಯೋಚಿಸುವುದು ಒಳ್ಳೆಯದು. ಒಂದು ವೇಳೆ ಪುರುಷನೇ ಮಹಿಳೆಯ ಬಗ್ಗೆ ಚೀಪ್ ಆಗಿ ಮಾತಾಡಿದರೆ ಸಮಾಜ ಒಪ್ಪುತ್ತಾ? ಪುರುಷ ಈ ರೀತಿ ಓಪನ್ನಾಗಿ ಕಮೆಂಟ್ಸ್ ಮಾಡಿದ್ದರೆ ಆತನನ್ನು ಎಳೆದು ಜೈಲಿಗೆ ತಳ್ಳುತ್ತಿರಲಿಲ್ಲವೇ? ಅಂತಹ ಮಾತನ್ನು ಪುರುಷರು ಹೇಳಿದ್ದರೆ ಒಪ್ಪಲು ಸಾಧ್ಯವಿರದಿದ್ದರೆ ಮಹಿಳೆ ಹೇಳಿದರೆ ಮಾತ್ರ ಯಾಕೆ ಸಹ್ಯ?” ಎನ್ನುವ ಪ್ರಶ್ನೆ ಎತ್ತಿದ್ದಾಳೆ.