ಯಡ್ಡಿಗೆ ಸೀಎಂ ಹುದ್ದೆ ತಪ್ಪಿಸುವುದೇ ಈಶ್ವರಪ್ಪ ಅವರನ್ನು ಬೆಂಬಲಿಸುವ ಪರಿವಾರದವರ ಗುರಿ

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಿರುವುದು ಬಿ ಎಸ್ ಯಡ್ಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಲು ಅಲ್ಲ ಎಂದು ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ ನೀಡಿದÀ ಹೇಳಿಕೆ ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದ್ದಂತೂ ಖಂಡಿತಾ.
ರಾಯಣ್ಣ ಬ್ರಿಗೇಡ್ ಸಂಘಟನೆಯಲ್ಲಿ ತೊಡಗಿರುವ ಬಗ್ಗೆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದರೂ ಲೆಕ್ಕಿಸದೆ ಸಂಘಟನೆಯಲ್ಲಿ ತೊಡಗಿದ್ದಾರೆ. ಈಶ್ವರಪ್ಪ£ರಿಗೆÀ ಪರಿವಾರದ ನಾಯಕರೊಬ್ಬರು ಬೆಂಬಲಕ್ಕೆ ನಿಂತಿರುವುದು ಗುಟ್ಟೇನಲ್ಲ.
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಅಗತ್ಯ ಬಹುಮತ ಪಡೆದು ಅಧಿಕಾರ ಚುಕ್ಕಾಣಿ ಹಿಡಿಯುವುದನ್ನು ತಪ್ಪಿಸಲು ಈಶ್ವರಪ್ಪರನ್ನು ದಾಳವಾಗಿ ಉಪಯೋಗಿಸಿಕೊಂಡು ಅಧಿಕಾರ ಹಂಚಿಕೊಳ್ಳಲು ಆಸೆ ಪಟ್ಟಿರುವ ಪಕ್ಷದ ನಾಯಕರು ತಂತ್ರಗಾರಿಕೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪಕ್ಷದ ನಾಯಕರ ಅಣತಿಯಂತೆ ವರ್ತಿಸುತ್ತಿರುವ ಈಶ್ವರಪ್ಪ ಅನಿವಾರ್ಯ ಪರಿಸ್ಥಿತಿ ಎದಿರಾದರೆ ಬಿಜೆಪಿ ತೊರೆಯಲು ಹಿಂದೆ ಮುಂದೆ ನೋಡಲಾರರು.
ಅದೇ ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಯಾವ ಪಕ್ಷವೂ ಬಹುಮತ ಬರಬಾರದು, ಸಮ್ಮಿಶ್ರ ಸರಕಾರ ರಚನೆಯಾದರೆ ತಮಗೆ ಕಿಮ್ಮತ್ತು ಎಂದು ಅರಿತಿರುವ ರಾಜಕೀಯ ಪಕ್ಷವೊಂದು ಈಶ್ವರಪ್ಪನವರ ಬೆನ್ನಿಗೆ ನಿಂತು, ಪಕ್ಷದ ನಾಯಕತ್ದ ವಿರುದ್ಧ ಈಶ್ವರಪ್ಪನವರನ್ನು ಎತ್ತಿ ಕಟ್ಟುತ್ತಿದ್ದಾರೆಂದು ಹೇಳಲಾಗುತ್ತಿದೆ.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶ ಪಕ್ಷದ ಕಾರ್ಯಕರ್ತರಲ್ಲಿ ನಾಯಕತ್ವದ ಬಗ್ಗೆ ಗೊಂದಲ ಮೂಡಿಸಿದರೆ ಬಿಜೆಪಿಗೆ ಬಹುಮತ ಬರುವುದನ್ನು ತಡೆಯಬಹುದು. ಆ ಮೂಲಕ ಸಮ್ಮಿಶ್ರ ಸರಕಾರ ರಚನೆಯ ಅನಿವಾರ್ಯ ಪರಿಸ್ಥಿತಿಯನ್ನು ಸೃಷ್ಟಿಸಿ, ಯಡ್ಡಿಯೂರಪ್ಪರಿಗೆ ಮುಖ್ಯಮಂತ್ರಿ ಪಟ್ಟ ತಪ್ಪಿಸುವ ರಾಜಕೀಯ ಹುನ್ನಾರ ನಡೆಸಲಾಗುತ್ತಿದೆ ಎಂಬ ಮಾತು ಬಿಜೆಪಿಯಲ್ಲಿ ದಟ್ಟವಾಗಿದೆ.
ಒಂದು ವೇಳೆ ಸಂಗೊಳ್ಳಿ ರಾಯಣ್ಣ ಬ್ರಿಗೇಡಿಗೆ ಸಂಬಂಧಿಸಿದಂತೆ ಈಶ್ವರಪ್ಪನವರ ವಿರುದ್ಧ ಬಿಜೆಪಿ ವರಿಷ್ಠರು ಕ್ರಮ ಕೈಗೊಂಡರೆ ಅವರನ್ನು ಪಕ್ಷಕ್ಕೂ ಬರಮಾಡಿಕೊಂಡು ರಾಜ್ಯಾಧ್ಯಕ್ಷರನ್ನಗಿಸುವ ಭರವಸೆಯನ್ನು ರಾಜಕೀಯ ಪಕ್ಷವೊಂದು ನೀಡಿದೆಯೆನ್ನಲಾಗಿದೆ. ಈ ಸಂಬಂಧ ಸಂಗೊಳ್ಳಿ ರಾಯಣ್ಣ ಬ್ರಿಗೇಡಿನ ಕೆಲ ಮುಖಂಡರು ರಾಜಕೀಯ ಪಕ್ಷದ ವರಿಷ್ಠ ನಾಯಕರ ಜೊತೆ ಮಾತುಕತೆ ನಡೆಸಿರುವುದು ಸುಳ್ಳಲ್ಲ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ದೊಡ್ಡ ಅಧಿಕಾರದ ಕನಸಿನಲ್ಲಿರುವ ಈಶ್ವರಪ್ಪ ಯಡಿಯೂರಪ್ಪರ ವಿರುದ್ಧ ನೇರವಾಗಿ ತಿರುಗಿಬಿದ್ದು ಯಡ್ಡಿಯೂರಪ್ಪರೇ ಮುಂದಿನ ಮುಖ್ಯಮಂತ್ರಿ ಎಂಬ ರಾಗ ಬದಲಾಯಿಸಿ, ಮತ್ತೊಮ್ಮೆ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡುವುದು ಬ್ರಿಗೇಡ್ ಗುರಿ ಅಲ್ಲ ಎಂದು ಗುಡುಗುವಾಗಲೇ ಅರ್ಥವಾಗುವುದಿಲ್ಲವೇ

  • ಕೆ ಮಾದಯ್ಯ
    ಕಿನ್ನಿಮುಲ್ಕಿ ಉಡುಪಿ