ಸಂಸದನ ಯೋಗ್ಯತೆ ಮೀರಿ ಅನಂತಕುಮಾರ ವರ್ತನೆ

ಈಶ್ವರಪ್ಪ

ಈಶ್ವರಪ್ಪ ಕಟು ಟೀಕೆ

ಶಿವಮೊಗ್ಗ : ಶಿರಸಿಯ ಖಾಸಗಿ ಆಸ್ಪತ್ರೆಯ ವೈದ್ಯರಿಗೆ ಹಲ್ಲೆ ನಡೆಸಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ವಿಧಾನ ಪರಿಷತ್ ವಿಪಕ್ಷ ನಾಯಕ ಈಶ್ವರಪ್ಪ ಕಟುವಾಗಿ ನಿಂದಿಸಿದ್ದಾರೆ.

ವೈದ್ಯರಿಗೆ ಹಲ್ಲೆ ನಡೆಸಿರುವ ಹೆಗಡೆ ಸಂಸದನಾಗಲು ಯೋಗ್ಯರಲ್ಲ. ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಎಂದವರು ಸುದ್ದಿಗಾರರಲ್ಲಿ ಹೇಳಿದರು.

ತನ್ನ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡ್ಡಿಯೂರಪ್ಪ ನಡುವಿನ ಭಿನ್ನಾಭಿಪ್ರಾಯ ಶೀಘ್ರ ಬಗೆಹರಿಸುವುದಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭರವಸೆ ನೀಡಿದ್ದಾರೆಂದು ಈಶ್ವರಪ್ಪ ತಿಳಿಸಿದರು.