ಈಶ್ವರಪ್ಪ ಬ್ರಿಗೇಡ್ ಪಕ್ಷ ವಿರೋಧಿ

ಯಡ್ಡಿ ಆರೋಪ

ಕಲಬುರ್ಗಿ : ಬಿಜೆಪಿ ಮುಖಂಡ ಈಶ್ವರಪ್ಪ ಮುಂದಾಳತ್ವದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಆರೋಪಿಸಿದ್ದಾರೆ. .

ಬಿಜೆಪಿ ಕಾರ್ಯಕಾರಿಣಿ ಸಭೆಯ ಸಮಾರಂಭಕ್ಕೆ ಮುಂಚೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಯಡಿಯೂರಪ್ಪ, ಸಂಗೊಳ್ಳಿ ರಾಯಣ್ಣ ಬ್ರಿಗೇಡಿನೊಂದಿಗೆ ಶಾಮೀಲಾಗಿರುವ ಬಿಜೆಪಿ ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶವೊಂದು ರವಾನಿಸಲಾಗಿದೆ ಎಂದರು.

“ಬ್ರಿಗೇಡಿನ ವಿರುದ್ಧ ಹಲವರು ಧ್ವನಿ ಎತ್ತಿದ್ದಾರೆ. ಅಂತಹವರು ತಮ್ಮ ಅಭಿಮತವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಮುಖಂಡ ಮುರಳೀಧರ ರಾವರೊಂದಿಗೆ ಹಂಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಬ್ರಿಗೇಡಿನೊಂದಿಗೆ ಅಸಂತುಷ್ಟರಾದವರನ್ನು ಸೇರಿಸಿಕೊಂಡು ಪಕ್ಷ ಬಲಗೊಳಿಸಲಾಗುವುದು” ಎಂದು ರಾಜ್ಯಾಧ್ಯಕ್ಷರು ಸುದ್ದಿಗಾರರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ಈಶ್ವರಪ್ಪ ಹೇಳಿದ್ದೇನು : ಜನವರಿ 26ರಂದು ಬಾಗಲಕೋಟೆಯ ಕೂಡಲ ಸಂಗಮದಲ್ಲಿ ಬ್ರಿಗೇಡಿನ ರಾಜ್ಯ ಮಟ್ಟದ ಸಮಾವೇಶ ನಡೆಯಲಿದೆ. “ಈ ಸಭೆ ನಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ” ಎಂದು ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.  ಬ್ರಿಗೇಡಿನ ಉದ್ದೇಶಕ್ಕೆ ಬಿಜೆಪಿಯ ಹಿರಿಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಂದು ಈಶ್ವರಪ್ಪ ಹೇಳಿದರು.