ಬೀದಿಪಾಲಾದ ಎರ್ಮಾಳಿನ ದೇವಾಡಿಗ ಕುಟುಂಬ

ನಮ್ಮ ಪ್ರತಿನಿಧಿ ವರದಿ

15pdb3 15pdb1

ಪಡುಬಿದ್ರಿ : ಮನೆ ಖಾಲಿ ಮಾಡಲು ಎರಡು ದಿನಗಳ ಕಾಲಾವಕಾಶ ಕೋರಿದ್ದರೂ ಕೇಳದ ಬ್ಯಾಂಕ್ ಅಧಿಕಾರಿಗಳು ಮನೆಮಂದಿ ಬಿಟ್ಟುಹೋಗುವಂತೆ ಮಾಡಿದ್ದರಿಂದ ಮಳೆಯ ಮಧ್ಯದಲ್ಲೇ ಕುಟುಂಬ ಬೀದಿಪಾಲಾದ ಘಟನೆಯೊಂದು ತೆಂಕ ಎರ್ಮಾಳು ಕೆನರಾ ಬ್ಯಾಂಕ್ ಮುಂಭಾಗ ಬುಧವಾರ ನಡೆದಿದೆ. ಕಲ್ಯಾಣಿ ದೇವಾಡಿಗ ಕುಟುಂಬ ವಾಸದ ಮನೆಯನ್ನು ಕಳೆದುಕೊಂಡು ಬೀದಿಗೆ ಬಿದ್ದಿದೆ.