ಜೀವಿಸುವ ಹಕ್ಕಿನ ಹೋರಾಟಕ್ಕೆ ಮುಂದಾಳತ್ವ ವಹಿಸಿರುವ ಎರಿಕ್, ರಾಬರ್ಟಗೆ ಅಭಿನಂದನೆ

ಕರಾವಳಿ ಅಲೆ ಫೀಡ್ ಬ್ಯಾಕ್

ತಮ್ಮ ಜೀವಿಸುವ ಹಕ್ಕಿಗಾಗಿ ಜೆಪ್ಪು ಕಂಪೌಂಡ್ ನಿವಾಸಿಗಳು ಧಾರ್ಮಿಕ ನಾಯಕತ್ವದ ವಿರುದ್ಧ ನಡೆಸುತ್ತಿರುವ ಶಾಂತಿಯುತ ಪ್ರತಿಭಟನೆಗೆ ಖ್ಯಾತ ಸಾಮಾಜಿಕ ಕಾರ್ಯಕರ್ತ ಹಾಗೂ ಕೊಂಕಣಿ ಸಾಂಸ್ಕøತಿಕ ಸಂಘಟನೆ ಮಾಂಡ್ ಸೋಭಾಣ್ ಇದರ ಗುರ್ಕಾರ್ ಆಗಿರುವ ಎರಿಕ್ ಒಝಾರಿಯೋ ಹಾಗೂ ಇನ್ನೊಬ್ಬ ಹೋರಾಟಗಾರ ಹಾಗೂ ಇಂಡಿಯನ್ ಕ್ರಿಶ್ಚಿಯನ್ ಸರ್ವಿಸ್ ಅಸೋಸಿಯೇಶನ್ ಅಧ್ಯಕ್ಷ ರಾಬರ್ಟ್ ರೊಸಾರಿಯೋ ಅವರು ಕೂಡ ಕೈಜೋಡಿಸಿರುವ ಬಗ್ಗೆ ಕರಾವಳಿ ಅಲೆಯಲ್ಲಿ ಪ್ರಕಟವಾದ ವರದಿ ನೋಡಿ ಖುಷಿಯಾಯಿತು. ಅವರು ಸಮಾಜಕ್ಕೆ ದೊಡ್ಡ ಸೇವೆಯನ್ನೇ ಮಾಡುತ್ತಿದ್ದಾರೆ. ಪಿಯುಸಿಎಲ್, ಕ್ರಿಶ್ಚಿಯನ್ ಸರ್ವಿಸ್ ಅಸೋಸಿಯೇಶನ್, ಪೀಪಲ್ ಫಾರ್ ಸೋಶಿಯಲ್ ರಿಫಾಮ್ರ್ಸ್ ಈ ಜೆಪ್ಪು ಕಂಪೌಂಡ್ ನಿವಾಸಿಗಳ ಹೋರಾಟವನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ ಹಾಗೂ ಎಲ್ಲಾ ಸಮಾನಮನಸ್ಕ ಸಂಘಟನೆಗಳು ಹಾಗೂ ಜನರು ಅವರಿಗೆ ಸಂಪೂರ್ಣ ಬೆಂಬಲ ನೀಡಬೇಕೆಂದು ಕೋರುತ್ತದೆ. ಮಾನವ ಹಕ್ಕುಗಳಿಗಾಗಿ ನಡೆಸುವ ಹೋರಾಟ ಧರ್ಮದ ವಿರುದ್ಧದ ಹೋರಾಟವಲ್ಲ. ಏಸು ಕ್ರಿಸ್ತ ಬಡವನಾಗಿ ಹುಟ್ಟಿ, ಬಡವನಾಗಿಯೇ ಬದುಕಿದ್ದನೆಂಬುದನ್ನು ಧಾರ್ಮಿಕ ನಾಯಕರು ಮರೆತಿದ್ದಾರೆ.

ಈ ಹೋರಾಟದಲ್ಲಿ ನಾವು ನಿಮ್ಮ ಜತೆಗಿದ್ದೇವೆ.

ಟಿ ಪಿ ಬಿ ಡೇಸಾ, ಪಿಯುಸಿಎಲ್

LEAVE A REPLY