ಮೋರಿಗೆ ಕಾರು ಗುದ್ದಿ ಉದ್ಯಮಿ ದುರ್ಮರಣ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಪೇಪರ್ ಮಿಲ್ ಬಳಿಯ ಕೆಂಪ್ಲಾಜೆ ದೇವಸ್ಥಾನ ಸಮೀಪ ಕಾರು ಮೋರಿಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಸಿದ್ದಕಟ್ಟೆಯ ಉದ್ಯಮಿ ಮೃತಪಟ್ಟಿದ್ದಾರೆ.

ಸಿದ್ದಕಟ್ಟೆಯ ಲೋಕೆಶ್ ಶೆಟ್ಟಿ ಅವರ ಪುತ್ರ ಅವಿವಾಹಿತ ರಾಕೇಶ್ ಶೆಟ್ಟಿ (33) ಮೃತ ಉದ್ಯಮಿ. ಈತ ತನ್ನ ಮನೆಯಲ್ಲಿ ಇಂಟರಲಾಕ್ ಉದ್ಯಮ ನಡೆಸುತ್ತಿದ್ದರು. ಪೂಂಜ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಇವರು ತನ್ನ ಇಬ್ಬರು ಮಿತ್ರರಾದ ಸುಧೀಂದ್ರ ಶೆಟ್ಟಿ ಮತ್ತು ದಿನೇಶ್ ಜತೆ ಗುರುವಾರ ಮೂಡುಬಿದಿರೆಗೆ ಬಂದಿದ್ದರು. ರಾತ್ರಿ  ಊರಿಗೆ ಕಾರಿನಲ್ಲಿ ಹೊರಡುವಾಗ ಅಪಘಾತ ಸಂಭವಿಸಿದೆ. ದಿನೇಶ್ ಕಾರು ಚಲಾಯಿಸುತ್ತಿದ್ದು ಲೋಕೇಶ್ ಎದುರು ಸೀಟಿನಲ್ಲಿ ಕುಳಿತಿದ್ದರು. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.