ಜಮೀನು ಖಾಲಿ ಬಿಟ್ಟರೂ ಹುಲ್ಲು ಬೆಳೆಯಲು ಬಿಡಬೇಡಿ

ಸಾಂದರ್ಭಿಕ ಚಿತ್ರ

ಇತ್ತೀಚೆಗೆ ಒಂದು ಕಡೆ ಬೆಂಕಿ ಬಿದ್ದು ತೋಟ ಉರಿದು ಹೋಗಿ ಲಕ್ಷಗಟ್ಟಲೆ ನಷ್ಟ ಸಂಭವಿಸಿತು. ಇದಕ್ಕೆ ಯಾರು ಕಾರಣ ? ಒಂದೋ ಆ ತೋಟದವರೇ ಕಾರಣವಾದರೆ ಇನ್ನೊಂದು ಎಕರೆಗಟ್ಟಲೆ ಜಮೀನು ಇದ್ದು ಅದರಲ್ಲಿ ಬೆಳೆ ಬೆಳೆಸದೆ ಇದ್ದ ಕಾರಣದಿಂದ ಎದ್ದು ಬರುವ ಹುಲ್ಲನ್ನು ಕಟಾವು ಮಾಡದೆ ಇರುವುದು ಕಾರಣವಾಗಿದೆ. ಎಕರೆಗಟ್ಟಲೆ ಜಮೀನು ಇರುವವರು ತಮ್ಮ ಜಮೀನಿನಲ್ಲಿ ಬೆಳೆಯನ್ನು ಬೆಳೆಸಿ ಅದನ್ನು ಉಪಯೋಗಿಸಿದರೆ ಹುಲ್ಲು ಬೆಳೆದು ಬೆಂಕಿ ಬೀಳುವುದು ಕಡಿಮೆಯಾಗುತ್ತದೆ. ಆದರೆ ಹಾಗೆ ಮಾಡದೇ ಇರುವುದರಿಂದ ಬೆಂಕಿ ಹೆಚ್ಚಿಕೊಳ್ಳುತ್ತದೆ. ಕೆಲವು ಕಡೆ ತೋಟಗಳಲ್ಲಿಯೂ ಮಳೆಗಾಲದ ಹುಲ್ಲು ಹಾಗೆ ಇರುವುದು ಕಂಡು ಬರುತ್ತದೆ. ಬೇಸಿಗೆಯಲ್ಲಿ ಈ ಹುಲ್ಲು ಬಿಸಿಲಿಗೆ ಒಣಗಿ ಎಲ್ಲಿಯಾದರೂ ಬೆಂಕಿ ತಗುಲಿದರೆ ಅದಕ್ಕೆ ಯಾರು ಜವಾಬ್ದಾರಿ ಮಾಡಲು ಆಗುವುದಿಲ್ಲ.
ತೋಟವನ್ನು ಹೊಂದಿರುವವರು ತಮ್ಮ ತೋಟವನ್ನು ಒಣಹುಲ್ಲುಗಳು ಇರದಂತೆ ಸ್ವಚ್ಛವಾಗಿ ಇಡುವುದರ ಜತೆಗೆ ಅಕ್ಕ ಪಕ್ಕದ ಜಮೀನಿನಲ್ಲಿ ಹುಲ್ಲು ಇದ್ದರೆ ಅದನ್ನು ತೆಗೆಸುವಂತೆ ಆ ಜಮೀನಿನ ಮಾಲಕರನ್ನು ಒತ್ತಾಯಿಸಬೇಕು. ಇಲ್ಲದೆ ಇದ್ದರೆ ನಷ್ಟ ಸಂಭವಿಸಿದರೆ ಅದರ ನಷ್ಟ ಪಾವತಿಯನ್ನು ಮಾಡಬೇಕೆಂದು ಹೇಳಬೇಕು. ಹೀಗೆ ಮಾಡಿದರೆ ಪ್ರತಿಯೊಬ್ಬರೂ ತಂತಮ್ಮ ಜಮೀನನ್ನು ಖಾಲಿ ಬಿಟ್ಟರೂ ಹುಲ್ಲು ಬೆಳೆಯದಂತೆ, ಬೆಳೆದ ಹುಲ್ಲನ್ನು ಕಟಾವು ಮಾಡುವಂತೆ ಗಮನ ಕೊಟ್ಟರೆ ಈ ಸಮಸ್ಯೆ ಉದ್ಭವಿಸದು.

  • ರಾಜಾರಾಮ ಎಂ ಭಟ್, ಉದ್ಯಾವರ