`ಬೇಟಿ ಬಚಾವೊ’ ಆಂದೋಲನ ಬೆಂಬಲಕ್ಕೆ ಮಹಾರಾಷ್ಟ್ರಕ್ಕೆ ಬಂದ ಇಂಗ್ಲೆಂಡ್ ಮಹಿಳೆ


ಮುಂಬೈ : ಕೇಂದ್ರ ಸರ್ಕಾರದ `ಬೇಟಿ ಬಚಾವೊ, ಬೇಟಿ ಪಡಾವೋ’ ಯೋಜನೆಯನ್ನು ಬೆಂಬಲಿಸಲು ಭಾರತೀಯ ಮೂಲದ ಇಂಗ್ಲೆಂಡ್ ಮಹಿಳೆ ಏಕಾಂಗಿಯಾಗಿ ಪ್ರಯಾಣಿಸಿ ಮಹಾರಾಷ್ಟ್ರವನ್ನು ತಲುಪಿದ್ದಾರೆ.

ಮಂಗಳವಾರ ಮಹಾರಾಷ್ಟ್ರವನ್ನು ತಲುಪಿದ ಮಹಿಳೆ ಭಾರುಲತ ಕಾಂಬ್ಲೆಯನ್ನು ಕೇಂದ್ರ ಸಚಿವ ರಾಮದಾಸ ಅತ್ತಾವಲೆ ಸ್ವಾಗತಿಸಿದರು. ಕಾಂಬ್ಲೆ ರಷ್ಯಾದ ಮೂಲಕ ಚೀನಾಕ್ಕೆ ತೆರಳಿದ್ದರು, ಮಾಯನ್ಮಾರಿನಿಂದ ಭಾರತವನ್ನು ಪ್ರವೇಶಿಸಿದ್ದಾರೆ. ಅಸ್ಸಾಂ ಮುಖಾಂತರ ಉತ್ತರ ಪ್ರದೇಶಕ್ಕೆ ಪ್ರಯಾಣಿಸಿ ಅಲ್ಲಿಂದ ಮಹಾರಾಷ್ಟ್ರದತ್ತ ಚಲಿಸಿದ್ದಾರೆ. ಈ ಪ್ರಯಾಣಕ್ಕೆ ಅವರು 75 ದಿನಗಳನ್ನು ಪಡೆದುಕೊಂಡಿದ್ದಾರೆ. ಮೂಲತಃ ಗುಜರಾತಿನ ನವ್ಸರಿಯವರಾದ ಕಾಂಬ್ಲೆ, ಇಂಗ್ಲೆಂಡಿನಲ್ಲಿ ವೃತ್ತಿಪರ ಲಾಯರಾಗಿದ್ದಾರೆ.

`ಬೇಟಿ ಬಚಾವೊ, ಬೇಟಿ ಪಡಾವೋ’ ಎಂಬುದು ಕೇಂದ್ರ ಸರ್ಕಾರ ಮಹತ್ವದ ಯೋಜನೆಯಾಗಿದ್ದು, ಹೆಣ್ಣು ಮಕ್ಕಳ ರಕ್ಷಣೆ ಮತ್ತು ಶಿಕ್ಷಣವನ್ನು ಪ್ರೋತ್ಸಾಹಿಸುವುದು ಮತ್ತು ಈ ಕುರಿತು ಜಾಗೃತಿ ಮೂಡಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ.